ಪತ್ರಕರ್ತ, ಲೇಖಕ ಸುಭಾಷ ಬಣಗಾರ ಅವರು 1970 ಜೂನ್ 01 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರದಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ‘ಈ ಸಂಭಾಷಣೆ, ಬಯಲು ಗ್ರಂಥಾಲಯ, ಸಂಯುಕ್ತ ಬರಹ’ ಹಾಗೂ ‘ಮಾಧ್ಯಮ ವರ್ಗ’-ಇವು ಅವರ ಕೃತಿಗಳು. ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕಲಬುರಗಿ ಮೀಡಿಯಾ ಟ್ರಸ್ಟ್ ಪ್ರಶಸ್ತಿ, ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ’ ಮುಂತಾದವುಗಳಿಗೆ ಭಾಜನರಾಗಿದ್ಧಾರೆ.
ಸದ್ಯ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಕಲಬುರಗಿ ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.