About the Author

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ. 

ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. .

ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ಜುಗಲ್' (2017) ಕಾವ್ಯಾನುಸಂಧಾನ, ಕವಿ ಸಿದ್ದು ಯಾಪಲಪರವಿ ಅವರೊಡನೆ ಕಾವ್ಯ ಜುಗಲ್ ಬಂದಿ, ಒಳ್ಕಲ್ಲ ಒಡಲು (2018) ಕಾದಂಬರಿ, ಬ್ಯಾಸರಿಲ್ಲದ ಜೀವ (2019) ಜೀವನ ಚರಿತ್ರೆ, ಅಡುಗೆ ನಡುವೆ ಬಿಡುವು (2020) ವಿಮರ್ಶಾ ಬರಹ

ಇವರ ಅನೇಕ ಸಣ್ಣಕತೆಗಳಿಗೆ, ಗುಲಬರ್ಗಾ ವಿಶ್ವವಿದ್ಯಾಲಯದ ದಿ.ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಪ್ರಶಸ್ತಿ ಮೂರು ಬಾರಿ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಕೊಡುವ ಉಮಾದೇವಿ ಶಂಕರ್ ರಾವ್ ದತ್ತಿ ಬಹುಮಾನ ದೊರೆತಿದೆ.  'ಪ್ರಳಯದಲ್ಲೊಂದು ಪ್ರಣತಿ' ಕಥಾಸಂಕಲನಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಮಾತ್ರವಲ್ಲ; ವಿವಿಧ ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿ-ಗೌರವ ನೀಡಿ ಸನ್ಮಾನಿಸಿವೆ. 

 

ಕಾವ್ಯಶ್ರೀ ಮಹಾಗಾಂವಕರ

(11 Apr 1969)