ಶುಭಶ್ರೀ ಪ್ರಸಾದ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ ಕವನ ರಚನೆ, ಚಿತ್ರಗ್ರಹಣ, ವಾರ್ತಾವಾಚನ, ಕಾರ್ಯಕ್ರಮ ನಿರೂಪಣೆ, ಪತ್ರಿಕೆಗಳಿಗೆ ಲೇಖನ/ಪ್ರಬಂಧ ಬರೆಯುದು ಅವರ ಹವ್ಯಾಸವಾಗಿದೆ.
ಕೃತಿಗಳು: ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ (ಮಹಾಪ್ರಬಂಧ) ,ಹಣತೆ ಬೆಳಕು (ಕವನ ಸಂಕಲನ) ಒಡಲ ಕರೆಗೆ ಓಗೊಟ್ಟು (ಕಥಾ ಸಂಕಲನ), ಒಳಮನ (ಲೇಖನ ಸಂಗ್ರಹ) , ಹೂದಂಡೆಯ ಬೇಲಿ (ಕವನ ಸಂಕಲನ) ,ಮಂಜಿನಮಧುಪಾತ್ರೆ (ಪ್ರವಾಸ ಕಥನ) ಕಲ್ಲುಹಾಸಿನ ಮೇಲೆ ತಕಧಿಮಿ (ಲಲಿತ ಪ್ರಬಂಧಗಳು) ಶುಭನುಡಿ (ಮುಕ್ತಕಗಳು) .
ಪ್ರಶಸ್ತಿಗಳು: ಡಾ. ಹೆಚ್.ಡಿ.ಚೌಡಯ್ಯ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಜೀ.ಶಂ.ಪ ವೇದಿಕೆಯಿಂದ ರಾಜ್ಯಮಟ್ಟದ ‘ಕಾವ್ಯಶ್ರೀ’ ಪ್ರಶಸ್ತಿ, ಅನ್ನಪೂರ್ಣಶ್ರೀ ಪ್ರಶಸ್ತಿ, ರಾಜಮಾತೆ ಪ್ರತಾಪಕುಮಾರಿ ಅಮ್ಮಣ್ಣಿ ಪ್ರಶಸ್ತಿ, ಕಥಾಸಂಕಲನಕ್ಕಾಗಿ ಹುಬ್ಬಳ್ಳಿಯ ಚೇತನ ಸಾಹಿತ್ಯ ಪ್ರಶಸ್ತಿ, ಬೀದರದ ದೇಶಪಾಂಡೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ‘ಸಾಹಿತ್ಯ ಚೂಡಾಮಣಿ ರತ್ನ’ ಪ್ರಶಸ್ತಿ. ಯುವಬರಹಗಾರರ ಬಳಗದಿಂದ ರಾಜ್ಯಮಟ್ಟದ ಕುವೆಂಪು ಸಾಂಸ್ಕೃತಿಕ ಪ್ರಶಸ್ತಿ.