ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದ ಸಂಕೊಳ್ಳಿಯಲ್ಲಿ 1989 ಜೂನ್ 25 ಕ್ಕೆ ಜನಿಸಿದ ಇವರು. ತಮ್ಮ ಪ್ರಾಥಮಿಕ ಶಿಕ್ಷಣದ ಅವಧಿಯಲ್ಲಿಯೇ ನಿರೂಪಣೆ, ಸಂದರ್ಶನ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಪ್ರೌಢಶಾಲೆಯಲ್ಲಿ ಹಾಗೂ ಕಾಲೇಜಿನ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರು. ನಿರೂಪಣಾ ಕ್ಷೇತ್ರದಲ್ಲಿ ಕೆಲಸ ಮಾಡಿ ರಾಜ್ಯಮಟ್ಟದ ಕಾರ್ಯಕ್ರಮಗಳೂ ಸೇರಿ ಸರಿಸುಮಾರು 850 ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನಿರೂಪಿಸಿ ಜನಮೆಚ್ಚುಗೆ ಪಡೆದವರು.
ನಿರೂಪಣಾ ಶೈಲಿ ಹಾಗೂ ಸಾಹಿತ್ಯದ ಬಳಕೆಯಿಂದ ಜನತೆಯ ಮೆಚ್ಚಿನ ನಿರೂಪಕರಾದ ಇವರು ಸಿಂಚನಾ ಟಿ.ವಿ ವಾಹಿನಿ ಹಾಗೂ ಸದರಿ ವಿಸ್ಮಯ ವಾಹಿನಿಯ ನಿರೂಪಕರಾಗಿ, ವಾರ್ತಾ ವಾಚಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.
ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡ ಇವರು ಕುಮಟಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನುಡಿಜೇನು ಹಾಗೂ ಜನಮಾಧ್ಯಮ ಪತ್ರಿಕೆಯ ಅಂಕಣಕಾರರಾಗಿಯೂ ಇವರು ಲೇಖನಿ ಹಿಡಿದಿದ್ದಾರೆ.
ತಮ್ಮದೇ ಕನಸಿನ ಸತ್ವಾಧಾರ ಫೌಂಡೇಶನ್ ಸ್ಥಾಪಿಸಿ ಅದರ ಮೂಲಕ ಶೈಕ್ಷಣಿಕ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಮಾಡುತ್ತಿದ್ದು ಇದು ಅಪಾರ ಜನಮನ್ನಣೆ ಪಡೆದಿದೆ. ಸತ್ವಾಧಾರ ನ್ಯೂಸ್ ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಾ, ಶಿಕ್ಷಕನಾಗಿ, ನಾಟಕಗಳ ನಿರ್ದೇಶಕನಾಗಿ, ಸಾಹಿತಿಯಾಗಿ, ಅಂಕಣಕಾರರಾಗಿಯೂ ಗುರ್ತಿಸಿಕೊಂಡಿದ್ದಾರೆ.