About the Author

ಲಕ್ಷ್ಮೀಕಾಂತ ಗೌರಿಪುರ ಅವರು 1985 ಮೂಲತಃ ತುಮಕೂರು ತಾಲ್ಲೂಕಿನ ಗೌರಿಪುರ ಗ್ರಾಮದಲ್ಲಿ ಜನಿಸಿದರು. ಗೌರಿಪುರ, ಕೌತಮಾರನಹಳ್ಳಿ ಹಾಗೂ ಹರಳೂರು ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪೂರೈಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿ, ತುಮಕೂರು ವಿಶ್ವವಿದ್ಯಾಲಯದಿಂದ ಬಿ.ಇಡಿ., ಹಾಗೂ ಕನ್ನಡದಲ್ಲಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 'ಕರ್ನಾಟಕ ಗ್ರಾಮ ಚರಿತ್ರಾ ಕೋಶ' ಯೋಜನೆಯ ಕುಣಿಗಲ್ಲು ತಾಲ್ಲೂಕಿನ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿ ಜೆ.ಆರ್.ಎಫ್. ಫೆಲೋ ಆಗಿ 'ಪಂಪ-ಕುಮಾರವ್ಯಾಸರ ಕಾವ್ಯಗಳಲ್ಲಿ ಮಹಿಳಾ ಸಂಘರ್ಷದ ನೆಲೆಗಳು' ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ.ಗಾಗಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. 'ಅಸ್ಮಿತೆ' (ದೇಸಿ ಓದಿನ ಬರಹಗಳು) ಎಂಬ ಚೊಚ್ಚಲ ವಿಮರ್ಶಾ ಕೃತಿಯ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ.

ಲಕ್ಷ್ಮೀಕಾಂತ ಗೌರಿಪುರ