ಲೇಖಕ ದಾವಲಸಾಬ ನರಗುಂದ ಮೂಲತಃ ಗದಗ ಜಿಲ್ಲೆಯ ನರಗುಂದದವರು. 1994 ಜುಲೈ 09 ರಂದು ಜನನ. ತಂದೆ ಮೀರಾಸಾಬ ತಾಯಿ ಬೀಬಿಜಾನ್. . ಕಾವ್ಯ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ಅನುವಾದ, ಸಂಪಾದನೆ ಈ ಪ್ರಕಾರಗಳಲ್ಲಿ 02 ಕೃತಿಗಳನ್ನು ಪ್ರಕಟಿಸಿದ್ದಾರೆ. ತತ್ವಪದಗಳ ರಚನೆ ಇವರ ಹವ್ಯಾಸ. 'ಕಡಕೋಳ ಮಡಿವಾಳಪ್ಪ ಮತ್ತು ಶಿಶುನಾಳ ಶರೀಫ: ತೌಲನಿಕ ಅಧ್ಯಯನ' ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿದ್ದಾರೆ.