ಡಾ. ಶ್ರೀಶೈಲ ಗೋಲಗೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ರೋಣಿಹಾಳದವರು. 1970 ಜುಲೈ 25ರಂದು ಇವರ ಜನನ. ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಣಿಹಾಳದಲ್ಲಿ, ಕೊಲ್ಹಾರದ ಸಂಗಮೇಶ್ವರದಲ್ಲಿ ಪಿ.ಯು, ವಿಜಯಪುರದ ಎಸ್.ಬಿ. ಕಲಾ ಹಾಗೂ ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮತ್ತು 1993ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲವು ವರ್ಷ ಇಲಕಲ್ಲ, ಹುನಗುಂದ ಮಹಾ ವಿದ್ಯಾಲಯಗಳು ಮತ್ತು ಸಿ.ವಿ.ಚರಂತಿಮಠ ರೂರಲ್ ಪಾಲಿಟೆಕ್ನಿಕ್‌ದಲ್ಲಿ ತಾತ್ಕಾಲಿಕ ಇಂಗ್ಲಿಷ್ ಉಪನ್ಯಾಸಕರಾಗಿ, 2005ರಲ್ಲಿ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಸಂಗನಬಸಯ್ಯ ರಾಚಯ್ಯ ವಸ್ತ್ರದ, ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ಹುನಗುಂದದಲ್ಲಿ ಖಾಯಂ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕನಾಗಿ ಸೇವೆಗೆ ಸೇರ್ಪಡೆಯಾದರು. ಸದ್ಯ ಹುನಗುಂದ ತಾಲೂಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಅಧ್ಯಕ್ಷ, ವಚನ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಹಾಗೂ ಶರಣ ಸಾಹಿತ್ಯ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಡಿನ ಹಲವು ಪತ್ರಿಕೆಗಳಲ್ಲಿ ಇವರ ಕಥೆ ಹಾಗೂ ವಿಮರ್ಶಾ ಲೇಖನಗಳು ಪ್ರಕಟಗೊಂಡಿದ್ದು. ಇಂಗ್ಲಿಷ್ ಹಾಗೂ ಭಾರತೀಯ ಸಾಹಿತ್ಯ, ಇಂಗ್ಲಿಷ್ ಭಾಷಾಶಾಸ್ತ್ರ, ಧ್ವನಿಶಾಸ್ತ್ರ ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಮೇಲೆ ನಾಡಿನ ಶಾಲಾ, ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪ್ರಬಂಧ ಮಂಡನೆಯಾಗಿದ್ದು, ವಿವಿಧ ಸಂಸ್ಮರಣೆ ಹಾಗೂ ಅಭಿನಂದನ ಗ್ರಂಥಗಳ ಲೇಖಕ ಹಾಗೂ ಸಹ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಶಸ್ತಿಗಳು: 2017ರಲ್ಲಿ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ ಮಠದ 'ಸಮಾಜಮಾತೆ' ಪ್ರಶಸ್ತಿ, 2018ರಲ್ಲಿ ಶ್ರೀ ಸಂಗನಬಸವ ವಿದ್ಯಾವರ್ಧಕ ಸಂಘ, ರೋಣಿಹಾಳ ಅವರು ಸಂಶೋಧನ ಕ್ಷೇತ್ರಕ್ಕೆ ಕೊಡುವ 'ಶ್ರೀ ಸಂಗನಬಸವ ಪ್ರಶಸ್ತಿ' ಹಾಗೂ
ಕೃತಿಗಳು: ಬಸವಣ್ಣ ಮತ್ತು ಎಮರ್ಸನ್ ಆಸ್ ಟ್ರಾನ್ಸೆಂಡೆಂಟಲಿಸ್ಟ್ಸ್(2020), ಅನೇಕಾರ್ಥ(ವಿಮರ್ಶಾ ಸಂಕಲನ, 2021)