'ಯಾವ ಮುರಳಿ ಕರೆಯಿತು' ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ಒಮ್ಮೆ ಲೈಬ್ರರಿಗೆ ಹೋಗಿದ್ದಾಗ ಡಾ॥ಸತ್ವಂತ್ ಪಾಸ್ರೀಚಾರವರು ಪುನರ್‌ಜನ್ಮದ ಬಗ್ಗೆ ಸಂಗ್ರಹಿಸಿದ ವಿಷಯಗಳನ್ನು ಕುರಿತು ಬರೆದಿದ್ದ ಪುಸ್ತಕವನ್ನು ನೋಡಿದ್ದೆ. ಆ ಪುಸ್ತಕ ಓದಿದ ನಂತರ ಪುನರ್ಜನ್ಮದ ಬಗ್ಗೆ ಒಂದು ಕಾದಂಬರಿ ರಚಿಸಬೇಕೆನಿಸಿತು. ಈ ಕಾದಂಬರಿಯಲ್ಲಿ ಬರುವ ಪಾತ್ರ, ಘಟನೆಗಳು ಎಲ್ಲಾ ಕಾಲ್ಪನಿಕ, ಪುನರ್ಜನ್ಮದ ಬಗ್ಗೆ ಇನ್ನೂ ಕೆಲವು ಉತ್ತರಿಸಲಾಗದ ಪ್ರಶ್ನೆಗಳು ಉಳಿದುಕೊಂಡಿವೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE