ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕೃತಿ-ಯಾವ ಪ್ರೀತಿಯೂ ಅನೈತಿಕವಲ್ಲ...ಇದು ನಾಲ್ಕನೇ ಆವೃತ್ತಿಯ ಕಾದಂಬರಿ. ಪ್ರೇಮ-ಕಾಮವನ್ನು ಬೇರೆ ಬೇರೆಯಾಗಿ ನೋಡಲಾಗದು. ಪ್ರೇಮ ಸುಂದರವಾಗಿ ಕಾಣುತ್ತದೆ. ಕಾಮ ಒರಟಾಗಿ ಕಾಣಬಹುದು. ಆದರೆ, ಒಂದು ಮತ್ತೊಂದರೆ ಕೊನೆಯೂ ಹೌದು; ಆರಂಭವೂ ಹೌದು. ಗಂಡಿಗೆ ಕಾಮವು ಆರಂಭವಾದರೆ, ಹೆಣ್ಣಿಗೆ ಅದು ಅಂತಿಮ ಹಂತ. ಇಂತಹ ಮನೋವೈಜ್ಞಾನಿಕ ಅಂಶಗಳ ಹಿನ್ನೆಲೆಯಲ್ಲಿ ಒಂದು ಸಂಸಾರದ ಕಥೆ ಸಾಗುತ್ತದೆ. ಇದು ಕೇವಲ ಕಥೆ ಮಾತ್ರವಲ್ಲ; ಅದಕ್ಕಾಗಿ ಲೇಖಕರು ಈ ಕತಾ ವಸ್ತುವನ್ನು ಮನೋವಿಜ್ಞಾನದ ಚೌಕಟ್ಟಿನಲ್ಲಿರಿಸಿದ್ದು ಓದನ್ನು ಪರಿಣಾಮಕಾರಿಯಾಗಿಸಿದ್ದಾರೆ.
ಕನ್ನಡ ಪ್ರಮುಖ ಕಾದಂಬರಿಕಾರ, ಅಂಕಣಗಾರ, ಕಥೆಗಾರ, ವೈಜ್ಞಾನಿಕ ಮತ್ತು ಪರಿಸರ ಸಂಬಂಧಿ ಬರಹಗಾರರಲ್ಲಿ ಸಂತೋಷ್ ಮೆಹಂದಳೆಯವರು ಒಬ್ಬರು. ಅವರು ಸಣ್ಣ ಕಥೆಗಳು, ಕಾದಂಬರಿಗಳು, ಸಾಮಾಜಿಕ ಮತ್ತು ವೈಜ್ಞಾನಿಕ ಲೇಖನಗಳು, ಪರಿಸರ ಸಂಬಂಧಿ ಚಿತ್ರ ಲೇಖನಗಳು, ಅಂಕಣ ಬರಹಗಳು, ಪತ್ತೆದಾರಿ ಮತ್ತು ವೈಜ್ಞಾನಿಕ ಕಥಾ ಸಾಹಿತ್ಯ, ಪ್ರವಾಸಿ ಕಥನಗಳು, ಸೈನ್ಸ್ ಫಿಕ್ಷನ್, ಛಾಯಾಗ್ರಹಣ ಮತ್ತು ಅಷ್ಟೆ ಜವಾಬ್ದಾರಿಯುತವಾಗಿ ಪಟ್ಟಾಗಿ ಬರೆಯಬಲ್ಲ ದೈತ್ಯ ಕಸುವಿನ ಸಾಹಿತ್ಯಿಕ ಕಸುಬುದಾರರು. " ತರಂಗ, ಕರ್ಮವೀರ ಸುಧಾ ಪ್ರಜಾವಾಣಿ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಓ ಮನಸೇ, ತುಷಾರ, ಮಯೂರ, ಕನ್ನಡ ಪ್ರಭ, ಕಸ್ತೂರಿ, ಉತ್ಥಾನ ಮತ್ತು ಪ್ರತಿ ವರ್ಷದ ...
READ MORE