ಸಾಹಿತಿ ಕೌಂಡಿನ್ಯ ನಾಗೇಶ ಅವರ ಐತಿಹಾಸಿಕ ಕಾದಂಬರಿ ‘ವೀರಕ್ಷತ್ರೀಯ. ಕಾಲಗರ್ಭದಲ್ಲಿ ಕ್ಷ-ಕಿರಣ’ ಎಂಬುದು ಈ ಕೃತಿಗೆ ನೀಡೊಇರುವ ಉಪಶೀರ್ಷಿಕೆ. ಛತ್ರಪತಿ ಶಿವಾಜಿ ಕುರಿತ ಹತ್ತು ಹಲವು ಐತಿಹಾಸಿಕ ಪಠ್ಯಗಳು, ಕಾದಂಬರಿಗಳು ಬಂದಿವೆ. ಆದರೆ, ಅವೆಲ್ಲಕ್ಕಿಂತ ಭಿನ್ನವಾಗಿ, ವೀರಕ್ಷತ್ರೀಯ ಕಾದಂಬರಿಯು ಇತಿಹಾಸದಲ್ಲಿ ಕಾಣ ಸಿಗದೇ ಇರುವ ಸಂಗತಿಗಳು ಕಾದಂಬರಿಯ ಭಾಗವಾಗಿದ್ದು, ಕುತೂಹಲ ಕೆರಳಿಸುತ್ತವೆ. ಶಿವಾಜಿ ಛತ್ರಪತಿ ಇತಿಹಾಸ ಸಂಶೋಧನೆಗೂ ಈ ಕಾದಂಬರಿಯು ಹಲವು ಆಕರ-ಸಾಮಗ್ರಿ ಗಳನ್ನು ನೀಡುತ್ತದೆ.
ಕೌಂಡಿನ್ಯ ಕಾವ್ಯನಾಮದಿಂದ ಪ್ರಸಿಧ್ದಿಯನ್ನು ಪಡೆದಿರುವ ವೈ.ಎನ್ ನಾಗೇಶ್ ಅವರು ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರದವರು . ತಂದೆ ನಾರಾಯಣ ರಾವ್ ತಾಯಿ ಜಯಲಕ್ಷ್ಮಿ . ಮೂವತ್ತೆರಡು ವರ್ಷಗಳಿಂದ ಸಾಹಿತ್ಯ ಸೇವೆಯನ್ನು ಮಾಡಿಕೊಂಡಿದ್ದಾರೆ. ಇವರು ಮಂಗಳ, ತರಂಗ, ಸುಧಾ, ಕನ್ನಡ ಪ್ರಭ, ಪ್ರಜಾವಾಣಿ ,ಉದಯವಾಣಿ ಸೇರಿದಂತೆ ಅನೇಕ ಪತ್ರಿಕೆಗಳಲ್ಲಿ 350 ಕ್ಕೂ ಹೆಚ್ಚು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಭಾಷಾ ಸಂಶೋಧನಾ ಕೃತಿ, ಚಾರಿತ್ರಿಕ ಕೃತಿ, ಪೌರಾಣಿಕ ಗ್ರಂಥಗಳು ,ಧಾರ್ಮಿಕ ಮತ್ತು ಸಾಮಾನ್ಯ ಲೇಖನಗಳು, ಸಣ್ಣ ಕತೆಗಳು , ಕವನ ಸಂಕಲನಗಳು, ಚಲನಚಿತ್ರಗಳು ರಚಿಸಿದ್ದಾರೆ. ಪ್ರಶಸ್ತಿ ...
READ MORE