ಲೇಖಕ ಸತ್ಯಕಿ ಅವರು ಅನುವಾದಿಸಿದ ಕೃತಿ-ವಾಡಿವಾಸಲ್. ಈ ಕಿರು ಕಾದಂಬರಿ ಮೊದಲು ಮುದ್ರಣಗೊಂಡದ್ದು 1959 ರಲ್ಲಿ. ಸುಮಾರು ಅರವತ್ತು ವರ್ಷಗಳ ಹಿಂದೆಯೇ ಚಿತ್ರಕಥೆ ಶೈಲಿಯ ಕಿರುಕಾದಂಬರಿಯೊಂದು ಪ್ರಕಟಗೊಂಡಿತ್ತು ಎಂಬುದು ನನಗೆ ಅಚ್ಚರಿ. ಒಂದು ಸಾಹಸ ಕ್ರೀಡೆಯನ್ನು ಸಾಕ್ಷ್ಯಚಿತ್ರದಂತೆ ಸೆರೆ ಹಿಡಿದಿದೆ ಈ ಕೃತಿಯಲ್ಲಿ.ಸಂಪೂರ್ಣವಾಗಿ ಗ್ರಾಮೀಣ ಸೊಗಡಿದೆ. ಜಲ್ಲಿಕಟ್ಟು ಎಂದರೆ ಏನೆಂದು ತಿಳಿಯದವರಿಗೂ ಈ ಕೃತಿ ಮುಟ್ಟುತ್ತದೆ. ಕಾರಣ, ಗಟ್ಟಿಯಾದ ಕಧೆ ಎಂದು ಅನುವಾದಕರು ಹೇಳುತ್ತಾರೆ.
ತಮಿಳುನಾಡಿನ ಸಾಹಿತಿ ಪೆರುಮಾಳ್ ಮುರುಗನ್ ಅವರು ಕೃತಿಗೆ ಬೆನ್ನುಡಿ ಬರೆದು ‘ತಮಿಳುನಾಡಿನ ಅತೀ ಮುಖ್ಯವಾದ ಜಾನಪದ ಸಾಹಸ ಕ್ರೀಡೆ- ಜಲ್ಲಿಕಟ್ಟು. ಈ ಕ್ರೀಡೆಗೆ ಸುರ್ದೀರ್ಘ ಇತಿಹಾಸವಿದ್ದೂ ಈಗಲೂ ಮುಂದುವರಿದಿದೆ. ಈ ಕ್ರೀಡೆ ಕೇವಲ ಆಟವಲ್ಲ; ಇದೊಂದು ಜೀವನ ಶೈಲಿ. ಆ ದಿನಗಳಲ್ಲಿ ಈ ಕ್ರೀಡೆಯ ಹೆಸರು ‘ಏರು ತಳುವುದಲ್’. ಏರು ಎಂಬ ಶಬ್ದಕ್ಕೆ ಎತ್ತು ಅಥವಾ ಗೂಳಿ ಎಂಬ ಅರ್ಥವಿದೆ. ಗೂಳಿಯನ್ನು ಅಡಗಿಸಿ ಕನ್ಯೆಯ ಕೈ ಹಿಡಿಯುವ ವ್ಯಕ್ತಿಯ ಬಗ್ಗೆ ಚಿತ್ರಣಗಳಿವೆ. ಚಿ.ಸು. ಚೆಲ್ಲಪ್ಪ ಅವರು ವಾಡಿವಾಸಲ್ ಅನ್ನು ವಿವರಿಸುವ ವಿಧಾನ, ಪಾತ್ರಗಳನ್ನು ಬೆಳೆಸುವ ರೀತಿ, ಕಟ್ಟಿಕೊಡುವ ನೂಜ ಚಿತ್ರಣ, ಇವುಗಳಿಂದ ಅವರು ಎಂಥಾ ಶ್ರೇಷ್ಠ ಸಾಹಿತಿ ಎಂಬುದನ್ನು ತೋರಿಸುತ್ತದೆ. ಜಲ್ಲಿಕಟ್ಟು ಮೃಗವನ್ನು ಹಿಂಸಿಸುವ ಕ್ರೀಡೆ ಎಂದು ವಿಮರ್ಶಿಸುವ ಪ್ರಾಣಿ ದಯಾ ಗುಂಪಿನವರು ಒಮ್ಮೆ ‘ವಾಡಿವಾಸಲ್’ ಓದಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನುವಾದಕರ ಭಾಷೆಯೂ ಪರಿಣಾಮಕಾರಿಯಾಗಿದ್ದು, ಮೂಲ ಕಥೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿದ್ದಾರೆ.
‘ಸತ್ಯಕಿ’ ಎಂದೇ ಪರಿಚಿತರಾದ ಲೇಖಕ ಸತ್ಯಕಿ ವಿನೋದ ಅವರು ಮೂಲತಃ ಬೆಂಗಳೂರಿನವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕ-ಸಂಭಾಷಣೆಕಾರರಾಗಿ ವೃತ್ತಿಜೀವನ ಆರಂಭಿಸಿ, ಈಗ ಟಿ.ವಿ ಧಾರಾವಾಹಿಗಳ ಸಂಭಾಷಣೆಕಾರರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಯುಗೇ ಯುಗೇ (ಕಥಾ ಸಂಕಲನ), ವಾಡಿವಾಸಲ್ (ಅನುವಾದಿತ ಕೃತಿ) ...
READ MORE