ಉತ್ತರ ಪಥ

Author : ಡಿ.ಓ. ಸದಾಶಿವ (ಸಂಕಲ್ಪ)

Pages 392

₹ 400.00




Year of Publication: 2023
Published by: ಅಕ್ಷರ ಮಂಟಪ
Address: ಹಂಪಾನಗರ ಬೆಂಗಳೂರು
Phone: 9972676764

Synopsys

ಹಿಂಸೆ ಮತ್ತು ಮಾನವೀಯ ಸಂಘರ್ಷದಲ್ಲಿ ಸಾಗುವ ಕಥಾ ಹಂದರ ಕೂತುಹಲಕಾರಿ. ವಾಸ್ತವದೊಟ್ಟಿಗೆ ದೈವಿಕ, ಮಾಂತ್ರಿಕ ಆಯಾಮವನ್ನು ಬೆರೆಸಿ ಕತೆ ಹೇಳುವ ತಂತ್ರ ಚಂದಮಾಮಾ ಕಥಾ ತಂತ್ರವನ್ನು ನೆನಪಿಸುವಂತಿದೆ. ಪಾತ್ರಗಳ ಮುಗ್ಧತೆ, ಹಳ್ಳಿಯ ಒರಟು ಪ್ರವೃತ್ತಿ, ಸನ್ನಿವೇಶದ ನಿಗೂಢತೆಗೆ ಸಿಕ್ಕಿ ನರಳುವ ಪಾತ್ರಗಳ ಅತಂತ್ರ ಸ್ಥಿತಿ ಮರುಕ ಹುಟ್ಟಿಸುವುದು. ಘಟನೆಗಳ ಸರಪಳಿ ಸುತ್ತಿ ಸುತ್ತಿ ಒಳ ರಚನೆಯ ವ್ಯೂಹ ನಿರ್ಮಾಣ ಪತ್ತೇದಾರಿ ಅಂಶವನ್ನು ಕೂಡಿಸಿಕೊಂಡು ಓದುಗರನ್ನು ತವಕದಲ್ಲಿರಿಸುವುದು ಸದಾಶಿವ ಅವರ ಕಲೆಗಾರಿಕೆಗೆ ಪುರಾವೆ ಒದಗಿಸುವಂತಿದೆ. ಈಗಾಗಲೇ ಎರಡು ಕಾದಂಬರಿ ಬರೆದಿರುವ ಸಂಕಲ್ಪ ತಮ್ಮ ಈ ಮೂರನೇ ಕಾದಂಬರಿ 'ಉತ್ತರ ಪಥ'ದಲ್ಲಿ ಸಾಕಷ್ಟು ಪಳಗಿದವರಂತೆ ಕಾಣಿಸುತ್ತಾರೆ. ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾದ ಸಂಕಲ್ಪ ಕನ್ನಡ ಭಾಷೆಯನ್ನು ಸೊಗಸಾಗಿ ಬಳಸುವ ರೀತಿ ಮೆಚ್ಚುವಂತಿದೆ. ಅವರು ಇನ್ನಷ್ಟು ಕೃತಿಗಳನ್ನು ಕನ್ನಡಕ್ಕೆ ನೀಡುವಂತಾಗಲಿ ಎಂದು ಹಾರೈಸುವೆ. -ಚಂದ್ರಶೇಖರ ತಾಳ್ಯ ಖ್ಯಾತ ಕವಿಗಳು

About the Author

ಡಿ.ಓ. ಸದಾಶಿವ (ಸಂಕಲ್ಪ)
(14 January 1986)

`ಸಂಕಲ್ಪ' ಕಾವ್ಯನಾಮದ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಡಿ.ಓ ಸದಾಶಿವ ಅವರು ಜನಿಸಿದ್ದು 1986 ಜನವರಿ 14ರಂದು. ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ದೇವಿಗೆರೆಯವರು. ತಾಯಿ ಪಾರ್ವತಮ್ಮ. ತಂದೆ ಓಂಕಾರಪ್ಪ. ಹುಟ್ಟೂರಾದ ಕಂಗುವಳ್ಳಿಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಹೊಸದುರ್ಗ ಸರ್ಕಾರಿ ಪದವಿ ಕಾಲೇಜಿನಿಂದ ಕಾಮರ್ಸ್‌‌ ವಿಷಯದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಹೊಸದುರ್ಗ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಅಲಂಕಾರ-ಇವರ ಮೊದಲ ಕವನ ಸಂಕಲನ.  ...

READ MORE

Related Books