‘ಉದಕದೊಳಗಿನ ಕಿಚ್ಚು’ ಕೃತಿಯು ಸಿ.ಜಿ. ವೆಂಕಟೇಶ್ವರ ಅವರ ಕಾದಂಬರಿಯಾಗಿದೆ. ಹದಿಹರೆಯದ ಹುಡುಗನೊಬ್ಬ ಗ್ರಾಮೀಣ ಹಿನ್ನೆಲೆಯಲ್ಲಿ ಬೆಳೆಯುತ್ತಾ ಬದುಕಿನ ಆಯಾಮಗಳಿಗೆ ಅನುಭವಗಳಿಗೆ ತೆರೆದುಕೊಳ್ಳುತ್ತಾ ಹೋಗುವ ಬಗೆಯನ್ನು ಲೇಖಕರು ಇಲ್ಲಿ ಚಿತ್ರಿಸುತ್ತಾರೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಹಳ್ಳಿಯ ಸೊಗಡು ವಾತಾವರಣ ಭಾಷೆಗಳನ್ನು ಪೂರ್ಣಪ್ರಮಾಣದಲ್ಲಿ ಬಳಸಿರುವುದನ್ನು ಕಾಣಬಹುದು. ಹಾಗೆಯೇ ಇಲ್ಲಿ ಅಪ್ಪಟ ಬಯಲು ಸೀಮೆಯ ಸೊಗಡನ್ನು ಕಾಣಬಹುದು. ಹಳ್ಳಿಯ ಜಾತ್ರೆಯ ಇಂಚಿಂಚೂ ವರ್ಣನೆ ಅದಕ್ಕೊಂದು ಉದಾರಣೆಯಲ್ಲಿ ಕಾದಂಬರಿಯಲ್ಲಿ ಮೂಡಿದೆ. ಕಾಲಗರ್ಭದಲ್ಲಿ ಹುದುಗಿರುವ ಹಲವಾರು ನಾಟಿ ಪದಗಳ ಹೆಕ್ಕಿ ತಂದಿರುವುದು ಬಯಲು ಸೀಮೆಯವರ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ನವಿರಾದ ಪ್ರೇಮ ಕಥೆ, ಹಾಸ್ಯ, ಮನರಂಜನೆಯೊಂದಿಗೆ ಓದಿಸಿಕೊಳ್ಳುತ್ತಾ ಸಾಗುವ ಕಾದಂಬರಿ ಜೀತಪದ್ಧತಿಗೆ ಮುಕ್ತಿ, ಗ್ರಾಮಭಾರತದಲ್ಲಿನ ಜಾತ್ಯಾತೀತತೆಯ ನಿಜವಾದ ಬದುಕೆಂಬ ಸಾಮಾಜಿಕ ಸಂದೇಶಗಳನ್ನು ಸಾರುತ್ತದೆ.
ಸಿ.ಜಿ.ವೆಂಕಟೇಶ್ವರ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿಯವರು. ಇವರದು ಮೂಲತಃ ರೈತಾಪಿ ಕುಟುಂಬ. ತುಮಕೂರಿನ ಕ್ಯಾತ್ಸಂದ್ರ ದಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿದ್ದಾರೆ. ಗಜಲ್, ಹನಿಗವನ ಸೇರಿದಂತೆ ಸಾಹಿತ್ಯ ಹಾಗೂ ವೈಜ್ಞಾನಿಕ ಬರಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ರಂಗಭೂಮಿಯ ಕಲಾವಿದರು. ಕೃತಿಗಳು: ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ-ಪುರಸ್ಕಾರ: ಕಾವ್ಯ ಚಿಂತಾಮಣಿ, ರಾಜ್ಯ ಪ್ರಶಸ್ತಿ,ಸಂಘಟನಾ ಚತುರ ರಾಜ್ಯ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ. ...
READ MORE