‘ತಂಗಾಳಿ ಬಿರುಗಾಳಿ’ ಕೃತಿಯು ಜಿತುರೇಶಾ ಅವರ ಕಾದಂಬರಿಯಾಗಿದೆ. ಗ್ರಾಮೀಣ ಕಥಾವಸ್ತುವನ್ನಾಧರಿಸಿದ ಗ್ರಾಮೀಣ ಭಾಷೆಯಲ್ಲೇ ರೂಪುಗೊಂಡ ಈ ಕಾದಂಬರಿ ನಮಗರಿವಿಲ್ಲದಂತೆಯೇ ಕಥಾ ಪ್ರಪಂಚಕ್ಕೆ ಕರೆದೊಯ್ಯುವಲ್ಲಿ ಸಫಲವಾಗುತ್ತದೆ. ಅಷ್ಟೇಅಲ್ಲದೇ ದಲಿತ ಪಾತ್ರಗಳು, ಪ್ರಸಂಗಗಳ ಚಿತ್ರಣ ಸೇರಿದಂತೆ ಕೃತಿಯಲ್ಲಿ ಭಾಷಾ ಶೈಲಿಯು ಉತ್ತಮವಾಗಿ ಮೂಡಿಬಂದಿದೆ. ಜಾತಿ ಪದ್ಧತಿ, ಬಾಲ್ಯ ವಿವಾಹದಂತಹ ವಿಚಾರಗಳನ್ನು ಇಲ್ಲಿ ಪಾಲು ಪಡೆದುಕೊಂಡಿದೆ. ಹಸಿರು ಕೋಟೆಯೊಳಗಿನ ಊರು, ಹುಚ್ಚೆಗೌಡನ ಆಳ್ವಿಕೆ, ಕರಿಯಣ್ಣನ ಸಂಸಾರ, ಮಕ್ಕಳಿಲ್ಲದೆ ಮರುಗುವುದಾಯ್ತೇ, ಇಟ್ಟಮ್ಮಳ ಮದುವೆ, ಸಾವಿನ ಸಂಭ್ರಮ, ಆಧುನಿಕತೆಯತ್ತ ಹಳ್ಳಿಯ ಹೆಜ್ಜೆ, ಹದ್ದಿನ ಕಣ್ಣಿನ ಬಿತ್ತು ಹಕ್ಕಿ, ಕನಸಿನಿಂದ ಕನವರಿಸಿದ್ದು, ಹಾವು ಕಪ್ಪೆ ನುಂಗಿತ್ತು, ಕಂಡ ಕನಸು ನಿಜವಾಯ್ತು, ಸಿಡಿಲು ಬಡಿಯಿತು ಮನೆಮುರಿಯಿತು, ಗುಡಿಸಲ ಬಾಗಿಲು ಭದ್ರವಾಗಿ ಮುಚ್ಚಿತ್ತು, ಅಂದುಕೊಂಡಂತೆ ಬಯಕರ ಈಡೇರಲಿಲ್ಲ, ಬೆವರಿನ ಹನಿ ಸಿಯಿಯಾಯ್ತು, ಪಾಪಗಳು ಹದ್ದಾಗಿವೆ, ಯಾಂತ್ರಿಕ ಮನಸ್ಸು, ಪಾಪದ ಗುಡ್ಡ ಕರಗಿತು. ಕಣ್ಮರೆಯಾದ ಮುನಿಯಮ್ಮ, ಬೆಳ್ಳನೆ ಮೋಡ ಎರಡು ಹೋಳಾಯ್ತು ವಿಚಾರಗಳು ಇಲ್ಲಿ ಪಸ್ತಾಪನೆಯನ್ನು ಪಡೆದುಕೊಂಡಿದೆ.