1957-58ರ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಹಾಗೂ ವಸಾಹತುಶಾಹಿ ಆಸಕ್ತ ಬ್ರಿಟಿಷ್ ರ ಸೈನ್ಯದೊಂದಿಗೆ ಹೋರಾಡಿದ ನರಗುಂದ ಸಂಸ್ಥಾನದ ಅರಸ ಭಾಸ್ಕರರಾವ್ ಭಾವೆ (ಬಾಬಾಸಾಹೇಬ) ಕುರಿತ ಐತಿಹಾಸಿಕ ಕಾದಂಬರಿ-ಸ್ವಾತಂತ್ಯ್ರ ಭಾಸ್ಕರ. ಬಸವರಾಜ ನಾಯ್ಕರ ಅವರು
ತಮ್ಮದೇ ಸಂಬಂಧಿಕರ (ಬನ್ಯಾಬಾಪು, ಕೃಷ್ಣಾಜಿ ಪಂತ್ ಇತರರು) ಹಾಗೂ ಅಧಿಕಾರಿಗಳ ಸಂಚಿಗೆ ಮೋಸ ಹೋದ ಬಾಬಾಸಾಹೇಬರು ತಮ್ಮ ಪತ್ನಿ, ಮಕ್ಕಳು ಸಮೇತ ರಾಜ್ಯಾಧಿಕಾರವನ್ನು ಕಳೆದುಕೊಂಡರು. ಬ್ರಿಟಿಷರು ಬಾಬಾಸಾಹೇಬನನ್ನು ಬಂಧಿಸಿದರು. ಆದರೆ, ಬಾಬಾಸಾಹೇಬರಿಗೆ ಅತ್ಯಂತ ಆಪ್ತ ಅಡುಗೆಯವನೊಬ್ಬ ‘ತಾನೇ ಬಾಬಾಸಾಹೇಬ’ ಎಂದು ಬಿಂಬಿಸಿದ್ದು ಮಾತ್ರವಲ್ಲ; ಆತನೇ ಬ್ರಿಟಿಷರ ಕಣ್ಣು ಮರೆಸಿ ತಾನೇ ನೇಣುಗಂಬವೇರಿದ. ಅಲ್ಲಿಂದ ಕಣ್ಣು ಮರೆಸಿಕೊಂಡಿದ್ದ ಅರಸ ಬಾಬಾಸಾಹೇಬನು ಮುಂದೆ ನೇಪಾಳಕ್ಕೆ ಹೋಗಿ ನಾನಾಸಾಹೇಬ ಪೇಶ್ವ ಅವರಿಗೆ ಭೇಟಿಯಾಗಿ ನಂತರ ವಾರಣಾಸಿಗೆ ಬಂದರು. ಅಲ್ಲಿಯ ಸನ್ಯಾಸಿಗಳೊಂದಿಗೆ ಬೆರೆತಿದ್ದರು. ನಂತರ, ಅಲ್ಲೊಬ್ಬ ಮಹಿಳೆಯನ್ನು ಮದುವೆಯಾಗಿ ಒಬ್ಬ ಪುತ್ರನನ್ನೂ ಪಡೆದಿದ್ದರು. ಆಗ ಅವರಿಗೆ 62 ವಯಸ್ಸು. ನರಗುಂದದ ಅರಸು ಬಾಬಾಸಾಹೇಬ ಎಂಬ ತಮ್ಮ ನೈಜ ಗುರುತನ್ನು ತಾವು ಮರಣ ಹೊಂದುವವರೆಗೂ ನಿಗೂಢವಾಗಿರಿಸಿದ್ದರು.
ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್) ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು. ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು. ಅನುವಾದಿತ ಕೃತಿಗಳು: ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...
READ MORE