ಗಣೇಶಭಟ್ಟ ಕೊಪ್ಪಲತೋಟ ತುಂಬ ಪಕ್ವ ಮತ್ತು ಗಂಭೀರ ಚಿಂತನೆಯ ಯುವ ಪ್ರತಿಭೆ! ಶತಾವಧಾನಿ ಆರ್ ಗಣೇಶ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡ ಇವರು, ಓದಿನ, ಅಭ್ಯಾಸದ ಶಿಸ್ತನ್ನು ವಿಸ್ತಾರವಾಗಿ ಬೆಳೆಸಿಕೊಂಡು , ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಬದುಕಿಗೆ ದೊಡ್ಡ ಕನಸೆಂಬಂತೆಯೂ ತೋರುತ್ತಾರೆ. ಮಹಾಭಾರತದ ಸ್ತ್ರೀಪಾತ್ರಗಳು ಸ್ವಗತದಲ್ಲಿ ತಮ್ಮ ಕತೆಯನ್ನು ಹೇಳಿಕೊಳ್ಳುತ್ತಲೇ ಕಾದಂಬರಿ ಬೆಳೆಯುತ್ತದೆ. ಇರಾವತಿ ಕರ್ವೆಯವರ ಯುಗಾಂತದಂತೆ, ಗೋಳು ಮತ್ತು ಸ್ತ್ರೀವಾದಗಳೇ ಮುಖ್ಯವಾಗಿ , ಮೂಲಭಾರತದಿಂದ ಎತ್ತೆತ್ತಲೋ ಹೊರಳದ ಮತ್ತು ಭೈರಪ್ಪನವರ ಪರ್ವದಂತೆ , ವ್ಯಾಸದರ್ಶನದಿಂದ ತುಂಬ ಸ್ವೇಚ್ಛೆಯನ್ನೂ ಬಯಸದ, ಮೂಲನಿಷ್ಠೆಯಿಂದಲೇ ರೂಪುಗೊಂಡ ಕಾದಂಬರಿ ಈ ಸ್ತ್ರೀಪರ್ವ! ಓದಿ ಅನುಭವಿಸಲೇಬೇಕಾದ್ದು!
ಗಣೇಶ ಭಟ್ಟ ಕೊಪ್ಪಲತೋಟ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಪ್ಪಲತೋಟದವರು. ದಾವಣಗೆರೆಯ ಯುಬಿಡಿಟಿ ಇಂಜನಿಯರಿಂಗ್ ಕಾಲೇಜಿನಲ್ಲಿ ಬಿ.ಇ (ಮೆಕ್ಯಾನಿಕಲ್) ಪದವಿ ಪಡೆದ ಇವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಎಂ.ಎ (ಸಂಸ್ಕೃತ) ಪದವಿಯನ್ನೂ ಕೂಡ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಯಂತ್ರವಿನ್ಯಾಸದ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದಾರೆ. ಕನ್ನಡ ಸಂಸ್ಕೃತ ತೆಲುಗು ಭಾಷೆಗಳ ಸಾಹಿತ್ಯದಲ್ಲಿ ಆಸಕ್ತರು. ಹಳಗನ್ನಡದಲ್ಲಿ ವಿಶೇಷ ಪರಿಶ್ರಮ. ಕನ್ನಡದ ಪ್ರಮುಖ ಅಷ್ಟಾವಧಾನಿಗಳಲ್ಲಿ ಒಬ್ಬರು. ಕರ್ನಾಟಕದ ಹಲವು ಕಡೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಷ್ಟಾವಧಾನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಲ್ಲದೇ ಬೇರೆ ಬೇರೆ ಅವಧಾನಿಗಳ ಅವಧಾನಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಬಾರಿ ...
READ MORE