ಸರ್ಪಗಳು ಅನಾದಿ ಕಾಲದಿಂದಲೂ ಪರಿಸರದ ಅವಿಭಾಜ್ಯ ಅಂಗವಾಗಿದ್ದರೂ ಸಹ ನಮಗೆಲ್ಲರಿಗೂ ಅವುಗಳೆಡೆಗೆ ಅದೆಂಥದೋ ಒಂದು ರೀತಿಯ ಅದನ್ನು ಆಕರ್ಷಣೆ ಭೀತಿ ಭಕ್ತಿ ಕೂಡ ಹೌದು. ಪುರಾಣದ ನಂಬಿಕೆಗಳ ಪ್ರಕಾರ ಹಾವಿನ ದ್ವೇಷ ಹನ್ನೆರಡು ವರ್ಷ ಎಂದು ಕೇಳಿದ್ದೇನೆ. ಅವುಗಳಿರುವ ದಿವ್ಯಶಕ್ತಿ ಗಳಾಗಲಿ ಅನೂಹ್ಯ ರೂಪಾಂತರಗಳ ಸಂಗತಿಗಳೇ ಆಗಲಿ ನನಗೆ ಆಸಕ್ತಿಯ ವಿಷಯ ಆ ವಯಸ್ಸಿನಲ್ಲಿ ಈ ಕಾದಂಬರಿಯ ಕಂತುಗಳನ್ನು ಓದಿ ಕನಸಿನಲ್ಲಿಯೂ. ಕಾಕತಾಳಿಯವೋ ನಿಜಜೀವನದಲ್ಲಿಯೂ ಹಾವುಗಳೇ ಕಾಣಿಸುತ್ತಿದ್ದವು. ನಂತರ ಎಷ್ಟೋ ಗಂಭೀರವಾದ ಕಾದಂಬರಿಗಳನ್ನು ಓದಿದರೂ ಸಹ ಈ ಕಾದಂಬರಿ ಬಾಲ್ಯದಿಂದಲೂ ಅದೇಕೋ ನನ್ನ ಮನಸ್ಸಿನಲ್ಲಿ ಅದಮ್ಯವಾದ ಅಪೂರ್ವವಾದ ಸ್ಥಾನವನ್ನು ಸಂಪಾದಿಸಿಕೊಂಡು ಬಿಟ್ಟಿದೆ. ವಿಜ್ಞಾನ ಅಭಿವೃದ್ಧಿ ಹೊಂದಲು ಹಲವಾರು ಮಹಾನುಭಾವರ ಆತ್ಮ ತ್ಯಾಗ ಕಾರಣವಾಗಿದೆ. ಈ ಕಾದಂಬರಿಯ ನಾಯಕಿ ವಾಣಿ ಸಹ ತನ್ನ ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಬೇಕೆನ್ನುವ ಆಕಾಂಕ್ಷೆಯನ್ನು ಬಲವಾಗಿ ಹೊಂದಿದ್ದ ಅಪರೂಪದ ಸ್ತ್ರೀರತ್ನ .ಮಹಾ ಮೇಧಾವಿಯಾದ ಪ್ರೊಫೆಸರ್ ಕೃಷ್ಣ ಸ್ವಾಮಿಯವರು ವಾಣಿ ತನ್ನ ಅಧ್ಯಯನಕ್ಕಾಗಿ ಆರಿಸಿಕೊಂಡಿದ್ದ ಹಾವುಗಳು ಹಗೆ ತೊಡುತ್ತವೆಯೇ ಎನ್ನುವ ವಿಷಯದ ಬಗ್ಗೆ ಪುಸ್ತಕ ಜ್ಞಾನ ಹೊದುವುದು ಮಾತ್ರವಲ್ಲದೆ ಅವುಗಳು ಇರುವ ಸ್ಥಳಕ್ಕೆ ಹೋಗಲು ಸೂಚಿಸುತ್ತಾರೆ.
ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE