‘ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ ಸಂಪುಟ-5’ ಕೃತಿಯನ್ನು ಬಿ. ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಇಲ್ಲಿ ಕಾರಂತರ ಔದಾರ್ಯದ ಉರುಳಲ್ಲಿ ಕಾದಂಬರಿಯನ್ನು ನೋಡಬಹುದಾಗಿದೆ. ಈ ಕಾದಂಬರಿಯನ್ನ ಮೊದಲು ಬರೆದು ಪ್ರಕಟಿಸಿದ್ದು, 1947ರಲ್ಲಿ ಸ್ವಾತಂತ್ಯ್ರ ಬರುವ ಮುಂಚೆ. ಅದು ಮುಚ್ಚಾದ ಹೊತ್ತಿಗೆ ಭಾರತಕ್ಕೆ ಸ್ವಾತಂತ್ಯ್ರ ಬಂದಿರಬೇಕು. ಅದು ಎರಡನೆಯ ಅಚ್ಚನ್ನು ಕಂಡದ್ದು, 1958ರಲ್ಲಿ ಎಂದರೆ ಹತ್ತು ವರ್ಷಗಳ ಬಳಿಕ. ಮೂರನೆಯ ಆವೃತ್ತಿ ಅಚ್ಚಾಗುತ್ತಿರುವುದು 24 ವರ್ಷಗಳ ತುರವಾಯ. ಈ ಸಂಪುಟವು ಏಳೆಂಟು ದಶಕಗಳ ಅವರ ಅವ್ಯಾಹತ ಬರವಣಿಗೆಯ ಸಮಗ್ರ ದರ್ಶನ ನೀಡಲಿವೆ. ಲೇಖಕ ಕಾರಂತರ ಚಿಂತನೆಗಳು, ಅವರ ಬರವಣಿಗೆಯ ಬೆಳವಣಿಗೆ, ಶೈಲಿ, ಕನ್ನಡ ಭಾಷೆಯ ಸ್ವರೂಪ, ಬೆಳವಣಿಗೆ, ಕನ್ನಡ ನಾಡಿನ ಮಾತ್ರವಲ್ಲ ಭಾರತ ದೇಶದ ಐತಿಹಾಸಿಕ ಮತ್ತು ರಾಜಕೀಯ ನೋಟಗಳು, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಮಸ್ಯೆಗಳು ಇವೆಲ್ಲವುಗಳಿಗೆ ತರುಂ, ಮಧ್ಯ ವಯಸ್ಕ ಮತ್ತು ವಯೋವೃದ್ಧ, ಜ್ಞಾನವೃದ್ಧ ಕಾರಂತರು ಹೇಗೆ ಸ್ಪಂದಿಸಿದರು, ಕಾರಂತರ ವೈಚಾರಿಕತೆ, ಅವರ ಕಾಣ್ಕೆ, ಕಾಣಿಕೆಗಳು, ಮುಂತಾಗಿ ನೂರಾರು ಮಗ್ಗುಲುಗಳ ದರ್ಶನದ ಭಯ, ಬೆರಗು, ಭಾವುಕ ಅನುಭವಗಳಿಗೆ ಓದುಗ ತೆರೆದುಕೊಳ್ಳುವ ಪರಿ ಇಲ್ಲಿ ವ್ಯಕ್ತವಾಗಿದೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE