‘ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ ಸಂಪುಟ-4’ ಕೃತಿಯನ್ನು ಬಿ. ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮರಳಿ ಮಣ್ಣಿಗೆ ಕಾದಂಬರಿಯನ್ನು ಕಾಣಬಹುದಾಗಿದೆ. ಇದು ಒಂದೇ ತಲೆಮಾರಿನ ಕತೆಯಲ್ಲ. ಮೂರು ತಲೆಮಾರುಗಳ ಕತೆ. 1850ರ ಸುಮಾರಿಗೆ ತೊಡಗುವ ಈ ಕತೆಯು 1940ರಲ್ಲಿ ಮುಗಿಯುತ್ತದೆ. ನನ್ನ ಊರಿನ ಬಡತನದ ಬಾಳ್ವೆಯೇ ಕತೆಯ ವಸ್ತುವಾಗಿದೆ. ಈ ಬಾಳ್ವೆಯ ಪಶ್ನೆ ಮೂರು ತಲೆಮಾರುಗಳಲ್ಲಿ ಹೇಗೆ ಪ್ರತ್ಯುತ್ತರಗೊಳ್ಳುತ್ತದೆ ಎಂಬುವುದು ಈ ಕೃತಿಯಲ್ಲಿ ಚಿತ್ರಿಕರಿಸಲ್ಪಟ್ಟಿದೆ. ಆವರಣ, ಹೆಸರು, ನುಡಿಕಟ್ಟುಗಳು- ಇವುಗಳೆಲ್ಲ ನನ್ನ ಹುಟ್ಟೂರಿನ ಸುತ್ತಲಿನಿಂದಲೇ ಆರಿಸಲ್ಪಟ್ಟುವು. ಶೈಲಿಯೂ ಅವರ ಜೀವನದಲ್ಲಿನ ಬಳಕೆಯ ರೀತಿಯನ್ನು ಅನುಸರಿಸಿದೆ. ಆದುದರಿಂದ ನೂರಾರು ಪದಗಳಿಗೆ, ಪುಸ್ತಕದೊಂದಿಗೇನೆ ಕೊಟ್ಟ ಶಬ್ದಗಳ ಪಟ್ಟಿಯನ್ನು ಕಾಣಬೇಕಾದೀತು. ಈ ಬರಹದಲ್ಲಿ ಕಾಣುವ ನಾಯಕಿಯರ ಸೌಜನ್ಯ, ವಾತ್ಸಲ್ಯಗಳೆಂದರೆ ನಾನು ನನ್ನ ತಾಯಿಯಲ್ಲಿ ಕಂಡ ಆ ಸದ್ಗುಣಗಳ ತೀರ ಅಂಶವೆನ್ನಬೇಕು. ಸೈರಣೆಯ ಮೂರ್ತಿಯಾಗಿದ್ದ ಅವಳು ನನ್ನ ಜೀವನಕ್ಕೆ ಒಂದು ಹಿರಿಯ ಆದರ್ಶವಾಗಿದ್ದಳು. ಆ ಗುಣವು ಸಾವಿರಾರು ಭಾರತೀಯ ತಾಯಂದಿರಲ್ಲಿ ಇರುವುದೆಂದೂ ಬಲ್ಲೆ ಎಂದು ಇಲ್ಲಿ ತಿಳಿಸಿದ್ದಾರೆ.
ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ, ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...
READ MORE