ಕನ್ನಡ ಸಾಹಿತ್ಯದಲ್ಲಿ ಮನೋವೈಜ್ಞಾನಿಕ ನೆಲೆಯ ಕಾದಂಬರಿಗಳನ್ನು ಬರೆದ ಕೆಲವೇ ಕಲ ಲೇಖಕರ ಪೈಕಿ ಇಂದಿರಾತನಯ ಪ್ರಮುಖರು. ಕಾದಂಬರಿಯು ತನ್ನ ಮನೋಸೂಕ್ಷ್ಮ ನೆಲೆಯಲ್ಲಿ ಗಾಢವಾದ ಅನುಭವ ಕಟ್ಟಿಕೊಡುತ್ತದೆ. ವಿನೂತನ ಶೈಲಿಯು ಓದುಗರನ್ನು ಆಕರ್ಷಿಸುತ್ತದೆ.
“ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು..“ಸದಾ ಮರವೇರಿ ಕುಳಿತಿರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ..” “ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೊಬ್ಬಳು ಕಂಡುಕೇಳರಿಯದವನೊಬ್ಬನ ದುರಾಸೆಗೆ ಬಲಿಯಾದಳು...” ಇಂತಹ ಘಟನೆಗಳು ಮನೋ ವೈಜ್ಞಾನಿಕ ಅಧ್ಯಯನಕ್ಕೆ ಪೂರಕ ಮಾಹಿತಿ ನೀಡುತ್ತವೆ. ತರ್ಕಕ್ಕೆ ಸಿಕ್ಕದ ಇಂಥ ಘಟನೆಗಳು ಅತೀಂದ್ರಿಯ ಲೋಕವೊಂದರ ಪರಿಚಯ ಮಾಡಿಕೊಡುತ್ತವೆ. ಮಾತ್ರವಲ್ಲ; ಸಂಕಲ್ಪಶಕ್ತಿಯಿಂದಲೂ ಅಪೂರ್ವವಾದುದನ್ನು ಸಾಧಿಸಬಹುದು ಎಂಬ ಆಶಯವೂ ನೀಡುತ್ತದೆ.
ಕತೆ ಹೇಳುವ ನೇರ ಶೈಲಿ, ಒಟ್ಟು ಆಶಯವನ್ನು ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ, ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ - ಇವು ಕೃತಿಯ ಗಟ್ಟಿತನ.
ತಮ್ಮ ಮಾಂತ್ರಿಕ ಬರಹದಿಂದ ಓದುಗ ಬಳಗವನ್ನು ಸೃಷ್ಟಿಸಿಕೊಂಡ ಲೇಖಕ ವಿ.ಆರ್.ಶ್ಯಾಂ. ಇಂದಿರಾತನಯ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆದ ಇವರು ಸುಮಾರು 50ಕ್ಕೂ ಹೆಚ್ಚು ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.ತಾಂತ್ರಿಕ ವಿಷಯದ ಬಗ್ಗೆ ಕುತೂಹಲಕಾರಿ ಕಾದಂಬರಿಗಳನ್ನು ರಚಿಸಿರುವ ಇಂದಿರಾತನಯ ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ಮೂಡಿಸಿದವರು. ಅವರ ಶಾಕ್ತ್ಯಪಂಥದ ಪ್ರಯೋಗಶೀಲ ಕೃತಿಗಳಾದ ‘ಮಂತ್ರಶಕ್ತಿ’, ಶಕ್ತಿಪೂಜೆ, ಸೇಡಿನಕಿಡಿ, ಹಾಗೂ ಪೂಜಾತಂತ್ರ ಅತ್ಯಂತ ಜನಪ್ರಿಯ ಕಾದಂಬರಿಗಳು. ಅವರ ‘ಚಕ್ರಾಯಣ’ ಸ್ವಾಮಿ ರಮಾನಂದರ ಹಿಮಾಲಯದ ತಪ್ಪಲಿನಲ್ಲಿ ಕೃತಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ...
READ MORE