ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಬದುಕಿನ ಒಂದೇ ನಾಣ್ಯದ ಎರಡು ಮುಖಗಳು. ತ್ಯಾಗರಾಜರು ‘ಸಾಕ್ಷಾತ್ಕಾಋಅ ನೀ ಸದ್ಭಕ್ತಿ ಸಂಗೀತ ಜ್ಞಾನವಿಹೀನುಲಕು ಮೋಕ್ಷಮುಗದಾ?’ ಎಂದು ಪ್ರಶ್ನಿಸಿದ್ದಾರೆ. ಪದೇ ಪದೇ ಈ ವಿಚಾರ ನನ್ನ ಮನಸ್ಸಿನಲ್ಲಿ ಮೂಡಿದಾಗ ಸಂಗೀತವನ್ನ ಬಳಸಿಕೊಂಡು ಯಾಕೆ ಒಂದು ಕಾದಂಬರಿಯನ್ನು ಬರೆಯಬಾರದು ಎನಿಸಿತು.ಒಂದಿಷ್ಟು ಸಂಗೀತ ಲೋಕ ಹೊಕ್ಕೆ. ಅನರ್ಘ್ಯ ರತ್ನಗಳ ದರ್ಶನ. ಮೋಹನಾ, ಆಹಿರಿ, ರೇವತಿ, ಆನಂದ ಭೈರವಿ, ಶಂಕರಾಭರಣ, ಕಾವೇರಿ, ಕಲ್ಯಾಣಿ... ರಾಗಗಳ ಸಾಕ್ಷಾತ್ಕಾರ. ಈ ಕಾದಂಬರಿ ಸಂಗೀತದ ಭಾವ, ರಸ, ಭಕ್ತಿಯನ್ನು ಪರಿಚಯಿಸಿದೆ. ಆದರೆ ನನ್ನ ಮಿತಿಯೊಳಗೆ ಕಾದಂಬರಿಗೆ ಬೇಕಾಗುವಷ್ಟು ಸಂಗೀತವನ್ನು ಮಾತ್ರ ಬಳಸಿಕೊಂಡಿದ್ದೇನೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE