ನಾವು ಪೃಥ್ವಿಯ ಮಕ್ಕಳು. ಆ ಪೃಥ್ವಿಯ ಗತಿಗೆ ಹೊಂದಿಕೊಳ್ಳಬೇಕು. ಶರದ್ ಶಿಶಿರಗಳು ಎಷ್ಟು ಅಗತ್ಯವೋ, ಗ್ರೀಷ್ಮ ವಸಂತಗಳು ಅಷ್ಟೇ ಅಗತ್ಯ, ಅನಿವಾರ್ಯ. ಇದು ಪ್ರಕೃತಿಯ ಸಂವಿಧಾನ.ಆದ್ದರಿಂದ ಈ ಭೂಮಿಯ ಬದುಕಿನ ನಿರಂತರತೆಯೊಂದಿಗೆ ಬೆರತು ಹೋಗಬೇಕು.ನಿಮ್ಮನ್ನು ಪ್ರೀತಿಸೋ ಸಹನಾ ಏನಾಗಬೇಕು. ನಮ್ಮಿಬ್ಬರ ಮದುವೆ ತೀರಾ ಅನಿರೀಕ್ಷಿತ. ಇದೊಂದು ಆಕಸ್ಮಿಕವೆಂದು ಮರೆತುಬಿಡೋಣ” ಕಾದಂಬರಿಯ ಒಂದು ಪಾತ್ರವಾದ ಭಾರತಿಯ ಮಾತು.ಸುಧಾಕರನ ಮಾತು ಅಷ್ಟೇ ತೀಕ್ಷ್ಣವಾಗಿತ್ತು.“ಅವೆಲ್ಲ ಅಷ್ಟು ಸುಲಭಾನಾ? ಅಗ್ನಿಸಾಕ್ಷಿಯಾಗಿ ನಿನ್ನ ಕುತ್ತಿಗೆಗೆ ತಾಳಿ ಕಟ್ಟಿ ನನ್ನವಳನ್ನಾಗಿ ಮಾಡಿಕೊಂಡಿದ್ದೇನೆ. ಅನಿರೀಕ್ಷಿತವೋ, ಆಕಸ್ಮಿಕವೋ,ಮನಃಪೂರ್ತಿಯಾಗಿ ನಿನ್ನ ಜೊತೆ ಸಪ್ತಪದಿಗಳನ್ನು ತುಳಿದು ವಾಗ್ದಾನ ಮಾಡಿದ್ದೀನಿ. ಅದಕ್ಕೆ ಬದ್ಧನಾಗಿರುವುದು ನನ್ನ ಕರ್ತವ್ಯ.” ಬದುಕಿನ ಬದ್ಧತೆಯ ಬಗ್ಗೆ ಅಚಲವಾದ ನಂಬಿಕೆ ಅನಿವಾರ್ಯವಾಗಿ ಬಿಡುತ್ತೆ ಎಂಬ ಭಾವವನ್ನು ಈ ಕಾದಂಬರಿ ಓದುಗನಿಗೆ ದಾಟಿಸುತ್ತದೆ. ಈ ಕಾದಂಬರಿಯ ಪ್ರತಿ ಪಾತ್ರವು ಅದನ್ನೇ ಹೇಳುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE