ಸಾಹಿತಿ ವಿ.ಕೃ.ಗೋಕಾಕರ”ಸಮರಸವೇ ಜೀವನ’ ಕೃತಿಯು ಬೃಹತ್ತು-ಮಹತ್ತುಗಳೆರಡನ್ನೂ ಒಳಗೊಂಡಿರುವ ಕೆಲವೇ ಕನ್ನಡ ಕಾದಂಬರಿಗಳಲ್ಲಿ ಒಂದು. ಅದರ ಎರಡನೇ ಭಾಗ ಸಮುದ್ರಯಾನ ಮತ್ತು ನಿರ್ವಹಣಗಳನ್ನೊಳಗೊಂಡಿದೆ.
ಸಂಸ್ಕೃತಿಯ ಸುಮುಖ-ದುರ್ಮುಖ ಎರಡನ್ನೂ ಉಳ್ಳ ಇಂಗ್ಲೆಂಡಿನ ರೀತಿನೀತಿಗಳು, ಸ್ವಾತಂತ್ರ್ಯ ಸಮರದಲ್ಲಿ ಸಿಲುಕಿದ ಭಾರತದ ಸ್ಥಿತಿ-ಎರಡರ ತೌಲನಿಕ ನೋಟದ ಹಿನ್ನೆಲೆಯಲ್ಲಿ ವಿಷ್ಣು-ಶೀನು, ನರಹರಿ-ಸುಶೀಲೆಯರ ಕಥೆ ಮುಂದುವರೆಯುತ್ತದೆ. ಭಿನ್ನ-ಭಿನ್ನ ಸ್ವಭಾವಗಳ ಜನರ ಮನೋವೈಜ್ಞಾನಿಕ ವಿಶ್ಲೇಷಣೆ ಸಮುದ್ರಯಾನದಲ್ಲಿದೆ.
ನಿರ್ವಹಣದಲ್ಲಿ ಎಲ್ಲಾ ಪಾತ್ರಗಳೂ ಒಂದು ಹದಕ್ಕೆ ಬರುತ್ತವೆ. ಇಲ್ಲಿ ಬರುವ ಘಟನೆಗಳು ತೀವ್ರವಾಗಿವೆ. ನಿರ್ಣಾಯಕವಾಗಿವೆ. ಇಲ್ಲಿ ವರ್ಣನೆಗಿಂತ ಮಿಗಿಲಾದ ಚಿಂತನೆಯಿದೆ. ಇಲ್ಲಿ ಬರುವ ಮೂರು ದಾಂಪತ್ಯಗಳು ಮತ್ತು ಸ್ವಾಮಿದಾಸರು ಹೆಚ್ಚಿನ ಪರಿವರ್ತನೆಯನ್ನು ಕಾಣುತ್ತಾರೆ.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE