ಇಟಲಿಯ ಫ್ಲಾರೆನ್ಸ್ ನಗರದ ಕ್ರೈಸ್ತ ದೇವಾಲಯವೊಂದರಲ್ಲಿ ಏಸುಕ್ರಿಸ್ತನ ಜೀವನ ವೃತ್ತಾಂತವನ್ನು ಸಮಗ್ರವಾಗಿ ವಿವರಿಸುವ ಚಿತ್ರಗಳನ್ನು ಚಿತ್ರಿಸಲು ಕಲಾವಿದ ಮೈಕಲ್ ಏಂಜಿಲೋ ಅವರನ್ನು ಕೇಳಿಕೊಂಡಿದ್ದು, ಅದನ್ನು ಆತ ಪೂರ್ಣಗೊಳಿಸಲು ಒಪ್ಪಿ, ಪಡಬಾರದ ಕಷ್ಟ ಪಡುವುದು, ಗುರಿ ಸಾಧನೆಯನ್ನು ಅರ್ಧಕ್ಕೆ ಕೈ ಬಿಡುವ ಬೇಸರ ಹಾಗೂ ಹೇಗಾದರೂ ಮಾಡಿ ಪೂರ್ಣಗೊಳಿಸುವ ಅನಿವಾರ್ಯತೆ ಇಂತಹ ದ್ವಂದ್ವಗಳ ಮಧ್ಯೆ ಬದುಕು ಸವೆಸುವುದು, ಪಾತ್ರಗಳ ಹುಡುಕಾಟದಲ್ಲಿ ಬಸವಳಿದು ಹೋಗುವುದು ಒಬ್ಬ ನೈಜ ಕಲಾವಿದನ ಮಾನಸಿಕ ತೊಳಲಾಟ ಎಲ್ಲವನ್ನೂ ಕೃತಿ ಕಲಾತ್ಮಕವಾಗಿ ಹೆಣೆದುಕೊಳ್ಳುತ್ತಾ ಹೋಗುತ್ತದೆ. ಮನುಷ್ಯ ಸಂಬಂಧಗಳ ಹುಡುಕಾಟದ ಸಂವೇದನಾಶೀಲತೆಯು ಇಡೀ ಕಾದಂಬರಿಯನ್ನು ಆವರಿಸಿದೆ.
ಕೆ. ವಿ. ಅಯ್ಯರ್ ಜನಿಸಿದ್ದು ಜನವರಿ 8, 1894ರಲ್ಲಿ. ಮೂಲತಃ ಕೋಲಾರ ಜಿಲ್ಲೆಯ ದೇವಸಮುದ್ರದವರು. ಬೆಂಗಳೂರಿನ ಕೋಟೆ ಬಳಿಯ ಎ.ವಿ.ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ, ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಕಡು ಬಡತನದ ಮಧ್ಯೆ ಪದವಿ ಪಡೆಯಲಿಲ್ಲ. ಆದರೆ, ಅಮೆರಿಕದ PHYSICAL CULTURE NATUROPATHYಯ ಅಕಾರ ಪತ್ರ ಪಡೆದು ತಾವೇ ಪ್ರೊಫೆಸರ್ ಎಂದು ಕರೆದುಕೊಂಡರು. ಛಾಯಾಚಿತ್ರಗ್ರಾಹಕರು. ರೇಡಿಯೋ ರಿಪೇರಿ, ಸ್ವರಲೇಖನ ಯಂತ್ರ ರಿಪೇರಿ ನಿಪುಣತೆ.ಇತ್ತು. ಉತ್ತಮ ವ್ಯಾಯಾಮ ಶಿಕ್ಷಕರು. ಮಹಾರಾಜ ಕೃಷ್ಣರಾಜ ಒಡೆಯರು ಇವರ ವ್ಯಾಯಾಮ ಕಲೆಗೆ ಮಾರು ಹೋಗಿದ್ದರು. ಕೈಲಾಸಂ ಅವರು ಇವರಿಗೆ ಸಾಹಿತ್ಯದ ಗೀಳು ಹಚ್ಚಿದರು. ರೀಡರ್‍ಸ್ ಡೈಜಿಸ್ಟ್ ...
READ MORE