ರೆಡ್ ಬೂಟ್ ರೋಸಿ

Author : ಜಿ.ಎಲ್.ಶಾಮ್‌‌‌ಪ್ರಸಾದ್

Pages 260

₹ 180.00




Year of Publication: 2019
Published by: ಪಿನಕ ಪಬ್ಲಿಕೇಶನ್ಸ್

Synopsys

ರೆಡ್ ಬೂಟ್ ರೋಸಿ ಪತ್ತೇದಾರಿ ರೋಚಕ ಕಾದಂಬರಿ. 1912 ರ ಯುದ್ಧವಾಗುವ ಸಂದರ್ಭದಲ್ಲಿ ಮರ್ಫಿಯಲ್ಲಿ ನಗರೀಕರಣ ಭಾಸವಾಗುವಾಗಲೆ ಶುರುವಾದ ಭೂಗತ ಚಟುಕಟಿಕೆಗಳ ನಡುವೆ ಭೂಗತವಾಗಿ ತಮ್ಮ ಕಾರ್ಯನಿರ್ವಹಿಸುತ್ತ ಬಂದ ಮೂರು ಏಜೆಂಟ್ ಗಳಿಂದ ಶುರುವಾದ ಸಂಸ್ಥೆ ಮುಂದೆ ಸರ್ಕಾರದ ಮಾನ್ಯತೆ ಪಡೆದು ಸಾಗಿದ್ದನ್ನು ಕಾದಂಬರಿಯ ಆರಂಭಕ್ಕು ಮೊದಲು ನೀಡಿ ಕಾದಂಬರಿಯನ್ನಾರಂಭಿಸುತ್ತಾರೆ. ಒಳ್ಳೆ ಸಿನಿಮೀಯ ರೀತಿಯಲ್ಲಿ ಆರಂಭವಾಗುತ್ತೆ ಈ ಕಾದಂಬರಿ. ಓದುತ್ತಾ ಹೋದಂತೆ ವಿಂಟೇಜ್ ರೆಟ್ರೋ ಅನುಭವಕ್ಕೆ ಬರುತ್ತೆ. ಅಧ್ಯಾಯಗಳ ಆರಂಭದಲ್ಲಿ ನೀಡಿರುವ ಕಪ್ಪುಬಿಳುಪು ಚಿತ್ರಗಳು ಕತೆಯ ಭಾರ ಹೆಚ್ಚಿಸುತ್ತಾ ಸಾಗುತ್ತೆ. ಓದುತ್ತಾ ಹೋದ ಹಾಗೆ ಹಳೆಗಾಲದ ಅಶರೀರವಾಣಿಯಲ್ಲಿ ಕತೆಯನ್ನ ಕೇಳುತ್ತಾ ಸಾಗಿದ ರೆಟ್ರೋ ಸಿನೆಮಾ ಕಣ್ಣಮುಂದೆ ಬಂದ ಅನುಭವವಾಗುತ್ತದೆ.

About the Author

ಜಿ.ಎಲ್.ಶಾಮ್‌‌‌ಪ್ರಸಾದ್
(19 July 1989)

ಕಾದ೦ಬರಿ ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಜಿ ಎಲ್ ಶಾಮ್ ಪ್ರಸಾದ್, ಮೂಲತಃ  ತುಮಕೂರಿನವರು. 1989ರ ಜು.19ರ೦ದು ಜನನ. ಎ೦ಜನಿಯರಿ೦ಗ್ ವ್ಯಾಸ೦ಗಕ್ಕಾಗಿ ಬೆ೦ಗಳೂರಿಗೆ ಬ೦ದು ಬರವಣಿಗೆಯನ್ನು ಹವ್ಯಾಸವಾಗಿ ಆರ೦ಭಿಸಿದರು. ಗೀತ ರಚನೆ , ಅ೦ಕಣ ಬರವಣಿಗೆಯಿಂದ ಇವರ ಆಸಕ್ತಿ ಕಾದಂಬರಿ ರಚನೆಯತ್ತ ಹೊರಳಿತು. 2013ರಲ್ಲಿ ಕಾದಂಬರಿ 'ಮರೀಚಿಕೆ ' ಹಾಗೂ  2019 ರಲ್ಲಿ ಪತ್ತೇದಾರಿ ಕಾದ೦ಬರಿ ' ರೆಡ್ ಬೂಟ್ ರೋಸಿ ' ಪ್ರಕಟವಾಯಿತು. ತಮ್ಮದೇ ಆದ ' ಪಿನಾಕ ಪಬ್ಲಿಕೇಶನ್ ' ಮುನ್ನಡೆಸುತ್ತಿದ್ದಾರೆ.  ...

READ MORE

Related Books