‘ರವಿಕಿರಣ ಹೊಂಗಿರಣ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಮೂರನೇ ಕಾದಂಬರಿ. ಆಧುನಿಕತೆಯ ಹೆಸರಲ್ಲಿ ನಾವು ಹೆಜ್ಜೆ ಹಾಕಬಲ್ಲೆವು ಎನ್ನುವುದು ಬರೀ ಭ್ರಮಾಲೋಕದ ಮಾತು ಆವೇಶದ ಪ್ರತಿಜ್ಞೆ ಸಾಮಾಜಿಕ ಸಂಬಂಧಗಳು ಸಂತಸ ಮತ್ತು ಆನಂದದ ಕ್ಷಣಗಳನ್ನು ಅಂಗಾಂಶ ಕೃಷಿಯಂತೆ ಅಭಿವೃದ್ಧಿಗೊಳಿಸುತ್ತದೆ ಎಂದು ಭಾವಿಸಿರುವ ಭಾರತದ ಭವ್ಯ ಸಾಮಾಜಿಕ ವ್ಯವಸ್ಥೆಗೆ ಚಿಕ್ಕ ಮಾದರಿಯಾಗಿ ಈ ಕೃತಿ ನಿಲ್ಲುತ್ತದೆ ಎನ್ನುವುದು ಅಂಜನಾ ಕೃಷ್ಣಪ್ಪ ಅವರ ಆಶಯ.
ಹೊಸ ವೈಜ್ಞಾನಿಕ ಕಲ್ಪನೆಯನ್ನು ವಾಸ್ತವ ಜಗತ್ತಿಗೆ ಪರಿಚಯಿಸುತ್ತಾ ಹೆಣ್ಣಿನ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಕಾದಂಬರಿ ಮಾದರಿಯಾಗುತ್ತಾ, ಸನಾತನ ಧರ್ಮ ಸಂಸ್ಕೃತಿಯ ನೆಲೆಯನ್ನು ಮೀರದ ಮೌಲ್ಯ ರೂಪಿಸುತ್ತದೆ- ರವಿಕಿರಣ ಹೊಂಗಿರಣ.
ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...
READ MORE