ಲೇಖಕ ಕೆ.ಎಸ್. ಕುಲಕರ್ಣಿ ಅವರ ಕಾದಂಬರಿ ಕೃತಿ ʻರಾಹು ಬಿಟ್ಟ ಚಂದಿರʼ. ಒಬ್ಬ ಪೋಲಿಸ್ ಅಧಿಕಾರಿಯ ಜೀವನದ ಸುತ್ತ ಹೆಣೆದಿರುವ ಕತೆಯಾಗಿದೆ. ಪೋಲಿಸರು ಕೊಲೆ ಗಡುಕರನ್ನೂ ಡಕಾಯಿತರನ್ನೂ ಎದುರಿಸಿ ಅವರನ್ನು ಚಾಣಾಕ್ಷತನದಿಂದ ಸೆರೆ ಹಿಡಿದು, ತನಿಖೆ ಮಾಡುವಾಗ ಎದುರಿಸಬೇಕಾಗುವ ಮಾನಸಿಕ ಹಾಗೂ ದೈಹಿಕ ಶ್ರಮಗಳ ಬಗ್ಗೆ ಇಲ್ಲಿ ಹೇಳಿದ್ದಾರೆ. ಅಪರಾಧಿಗಳನ್ನು ಸೆರೆಹಿಡಿಯಲು ಅವರ ಮಾನಸಿಕ ಚೌಕಟ್ಟನ್ನು ತಿಳಿದುಕೊಳ್ಳಲು ಅವರದೇ ಹಾದಿಯಲ್ಲಿ ನಡೆಯುವುದು, ಅದರಿಂದ ಜೀವಕ್ಕೆ ಬರಬಹುದಾದ ಕುತ್ತು ಹೀಗೆ ಈ ಎಲ್ಲಾ ಕಾರಣಗಳಿಂದ ಪೋಲಿಸರ ಸೇವೆಯು ಅತ್ಯಂತ ದುಸ್ತರವಾದದ್ದು. ಇದನ್ನು ಕುಲರ್ಣಿ ಅವರು ಕಾದಂಬರಿಯಲ್ಲಿ ಮುಖ್ಯ ವಸ್ತುವಾಗಿ ತೆಗೆದುಕೊಂಡಿದ್ದಾರೆ.