ರಾಜಮಾತೆ ಕೆಂಪನಂಜಮ್ಮಣ್ಣಿ’(ಮಾದರಿ ಮೈಸೂರಿನ ತಾಯಿ ಬೇರು) ಕೃತಿಯು ಗಜಾನನ ಶರ್ಮಾ ಅವರ ಕಾದಂಬರಿಯಾಗಿದೆ. ಈ ಕಾದಂಬರಿಯು ಮೈಸೂರಿನ ರಾಣಿ ಕೆಂಪನಂಜಮ್ಮಣ್ಣಿಯ ಬಗ್ಗೆ ಮಾತನಾಡುತ್ತಾ, ಬಂಗಾಳದ ಚತುರೆಯೊಬ್ಬಳು ಮೈಸೂರಿನ ಅರಮನೆಯ ಆಶ್ರಯ ಪಡೆದ ಪರಿಣಾಮದಿಂದಾಗಿಯೇ ನಮ್ಮ ರಾಷ್ಟ್ರಗೀತೆ ಆ ರಾಗರೂಪ ಪಡೆದದ್ದು!, ತಿರುವಾಂಕೂರಿನ ಆಡಳಿತ ನೆಲೆ ನೀಡದ ದಲಿತವೈದ್ಯನಿಗೆ ಮೈಸೂರು ಆಶ್ರಯ ಕೊಟ್ಟ ಪರಿಣಾಮವೇ ಸ್ವಾಮಿ ವಿವೇಕಾನಂದರು ಸಿಡುಬುರೋಗ ದಿಂದ ಬಿಡುಗಡೆ ಪಡೆದು ಚಿಕಾಗೋಗೆ ಹೋಗಲು ಸಾಧ್ಯವಾದದ್ದು! ಎನ್ನುವುದರ ಕುರಿತು ವಿಚಾರವನ್ನು ಕಟ್ಟಿಕೊಡುತ್ತದೆ. ಅಷ್ಟೇಅಲ್ಲದೆ ಕೋಲಾರದ ಚಿನ್ನದಗಣಿಗೆ ವಿದ್ಯುತ್ ಸರಬರಾಜು ಮಾಡಿ ಮುಂದೆ ಬೆಂಗಳೂರು ಸೇರಿದಂತೆ ನಮ್ಮ ನೆಲವನ್ನು ಬೆಳಗಿಸಿದ್ದು ಮೈಸೂರಿನ ರಾಣಿಯ ಪ್ರೋತ್ಸಾಹದಲ್ಲಿ ಸ್ಥಾಪಿತಗೊಂಡ ಕಾವೇರಿ ವಿದ್ಯುತ್ ಸ್ಥಾವರ!, ಆ ರಾಣಿಯ ಮುಂದಾಲೋಚನೆಯಿಂದಾಗಿಯೇ ಸಿಡುಬು, ಪ್ಲೇಗ್ ಮುಂತಾದುವಕ್ಕೆ ಲಸಿಕೆಗಳು ಮೈಸೂರು ಪ್ರಾಂತ್ಯದಲ್ಲಿ ತಯಾರಾದದ್ದು. ಮಾರಿಕಣಿವೆಯಲ್ಲಿ ಕೃಷಿನೀರಾವರಿ ಅಣೆಕಟ್ಟು ನಿರ್ಮಾಣಗೊಂಡದ್ದು, ಬೆಂಗಳೂರಿನಲ್ಲಿ ಮಲ್ಲೇಶ್ವರಂ, ಬಸವನಗುಡಿಗಳು ಪ್ರಾರಂಭವಾದದ್ದು: ಟಾಟಾ ಅವರ ಆಶಯದ ವಿಜ್ಞಾನ ಸಂಸ್ಥೆ ನೆಲೆಗೊಂಡದ್ದು... ಇಂತಹ ಅದೆಷ್ಟೋ ಅಪರೂಪದ ಅಮೂಲ್ಯವಾದ ಕೈಂಕರ್ಯಗಳನ್ನು ಕೊಡುಗೆಯಾಗಿಸಿದ, ಜನಮನದಲ್ಲಿ ಹೊಸಚಿಂತನೆಗಳ ಬೀಜ ಬಿತ್ತಿದ, ಮೈಸೂರು ಪ್ರಾಂತ್ಯದ ಬೆಳವಣಿಗೆಯ ರೂವಾರಿಯಾಗಿದ್ದ ಅಪರೂಪದ ರಾಣಿ ಕೆಂಪನಂಜಮ್ಮಣ್ಣಿ ಯವರ ಹೃದಯಸ್ಪರ್ತಿ ಜೀವನಗಾಥೆ ಈ ಕೃತಿ.
ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. 'ನಾಣಿ ಭಟ್ಟನ ಸ್ವರ್ಗದ ಕನಸು', 'ಗೊಂಬೆ ರಾವಣ', ಆಗ ಮತ್ತು ಸುಂದರಿ', 'ಹಂಚಿನಮನೆ ಪರಸಪ್ಪ', 'ಪುಸ್ತಕ ಪಾಂಡಿತ್ಯ' ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, 'ಕನ್ನಂಬಾಡಿಯ ಕಟ್ಟದಿದ್ದರೆ', 'ದ್ವಂದ್ವ ದ್ವಾಪರ', 'ಬೆಳ್ಳಿಬೆಳಕಿನ ಹಿಂದೆ' ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ...
READ MORE