ಪುನರ್ನವ

Author : ಸಿ. ಪಿ. ರವಿಕುಮಾರ್

Pages 432

₹ 500.00




Year of Publication: 2022
Published by: ಅಭಿನವ
Address: ಅಭಿನವ, 17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040.
Phone: 9448804905 / 9448676770

Synopsys

ಇತಿಹಾಸದ ಉದ್ದಕ್ಕೂ ಒಂದಲ್ಲ ಒಂದು ಯುದ್ಧದಿಂದ ನರಳುತ್ತಲೇ ಇರುವ ಇರಾಕ್ ದೇಶದಲ್ಲಿ ಕಳೆದ ಎರಡು ದಶಕಗಳು ಕಗ್ಗತ್ತಲಿನ ಅವಧಿ. ದೊಡ್ಡ ತೈಲನಿಕ್ಷೇಪಗಳನ್ನು ಹೊಂದಿದ್ದರೂ ಜಾಗತಿಕ ಚದುರಂಗದಾಟದಲ್ಲಿ ಕಾಯಿಯಂತೆ ಬಳಸಲಾದ ಇರಾಕ್ ದೇಶವು ಒಗ್ಗಟ್ಟಿಲ್ಲದೆ ತನ್ನ ಅಂತರಾಗ್ನಿಯಲ್ಲಿ ತಾನೇ ಉರಿಯುತ್ತಿರುವ ದೇಶ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕರು ಇನ್ನಿಲ್ಲದ ಘೋರ ಕೃತ್ಯಗಳನ್ನು ಅಮಾಯಕ ಜನರ ಮೇಲೆ ಎಸಗಿದ ದುರಂತ ಕಥೆಯನ್ನು ಇರಾಕ್ ದೇಶದ ಒಂದೊA ದು ಕಲ್ಲೂ ಹೇಳುತ್ತದೆ. ಪ್ರಸ್ತುತ ಕಾದಂಬರಿಯಲ್ಲಿ ಇರಾಕ್ ದೇಶದ ಕಥೆಯನ್ನು ಹೇಳುವ ಪ್ರಯತ್ನವಿದೆ. ಸುದ್ದಿಮಾಧ್ಯಮಗಳು, ಅಂತರ್ಜಾಲ ತಾಣಗಳಲ್ಲಿ ಓದಿದ, ನೋಡಿದ ಅನೇಕ ವೀಡಿಯೋ ತುಣುಕುಗಳು ಕಾದಂಬರಿಯ ಕಥಾಹಂದರಕ್ಕೆ ಪ್ರೇರಣೆ ನೀಡಿವೆ. ಕಾದಂಬರಿಯಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕವಾದರೂ ಅನೇಕ ಕಥಾಪ್ರಸಂಗಗಳು ನೈಜ ಘಟನೆಗಳನ್ನು ಆಧರಿಸಿದವು. ಮೋಸುಲ್ ನಗರದ ವಸ್ತು ಪ್ರದರ್ಶನಾಲಯವನ್ನು ಧ್ವಂಸಗೊಳಿಸಿದ ಘಟನೆ ನನ್ನ ಮನಸ್ಸನ್ನು ಕಲಕಿದೆ. ಇದಕ್ಕಿಂತ ಮುಂಚೆ ಅಫ್ಘಾನಿಸ್ತಾನದಲ್ಲಿ ಬಾಮಿಯಾನ್ ಬುದ್ಧ ಶಿಲ್ಪವನ್ನು ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ಒಡೆದುಹಾಕಿದಾಗಲೂ ನನ್ನ ಮನಸ್ಸು ವಿಕ್ಷುಬ್ಧವಾಗಿತ್ತು. ಆಗ ಒಂದು ಕವಿತೆ ಬರೆದದ್ದು ನೆನಪಿದೆ. ಮೋಸುಲ್ ನಗರದಲ್ಲಿ ನಡೆದ ಭಯೋತ್ಪಾದಕ ಘಟನೆಗಳನ್ನು ಪತ್ರಿಕೆಗಳಲ್ಲಿ ಓದುತ್ತಾ ಮನಸ್ಸು ಇನ್ನಷ್ಟು ವಿಚಲಿತವಾಯಿತು. ಪ್ರಸ್ತುತ ಕಾದಂಬರಿ ರೂಪುಗೊಂಡಿದ್ದು ಹೀಗೆ. `ಪುನರ್ನವ’ ಎಂದರೆ ಮರುಹುಟ್ಟು ಪಡೆದು ಮತ್ತೊಮ್ಮೆ ಹೊಸತನವನ್ನು ಪಡೆಯುವುದು ಎಂಬ ಅರ್ಥವಿದೆ. ಕಾದಂಬರಿಯ ನಾಯಕ ದೇಶವನ್ನು ಮತ್ತೊಮ್ಮೆ ಪುನರ್ನಿರ್ಮಿಸುವ ಕನಸನ್ನು ಕಾಣುತ್ತಾ ಅದೇ ಹೆಸರಿನ ಒಂದು ಸಂಸ್ಥೆಯನ್ನು ಪ್ರಾರಂಭಿಸುತ್ತಾನೆ. ಈ ಕಾದಂಬರಿಯ ನಾಯಕ ಕಂಪ್ಯೂಟರ್ ತಂತ್ರಾ ಂಶ ಕ್ಷೇತ್ರದಲ್ಲಿ ಅಪೂರ್ವ ಪ್ರತಿಭಾವಂತ. ಇವನಂಥ ಮನೋಭಾವನೆಯುಳ್ಳ ಯುವಕರ ಮೇಲೆ ಇರಾಕ್ ಮತ್ತು ಇಡೀ ವಿಶ್ವದ ಭವಿಷ್ಯ ನಿಂತಿದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಸಿ. ಪಿ.ರವಿಕುಮಾರ್ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಸಿ. ಪಿ. ರವಿಕುಮಾರ್

.ಸಿ.ಪಿ. ರವಿಕುಮಾರ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮತ್ತು ನ್ಯಾಷನಲ್ ಹೈಸ್ಕೂಲಿನಲ್ಲಿ ಅವರು ಪ್ರೌಢಶಾಲಾ ಶಿಕ್ಷಣ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬಿಇ ಪದವೀಧರರು, ಭಾರತೀಯ ವಿಜ್ಞಾನ ಸಂಸ್ಥೆಯಿಂದ  ಕಂಪ್ಯೂಟರ್ ವಿಜ್ಞಾನದಲ್ಲಿ ಎಂಇ ಪದವೀಧರರು, ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯುತ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಿಂದ ಕಂಪ್ಯೂಟರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್.ಡಿ. ಪದವೀಧರರು.  ಪ್ರಸಕ್ತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ (ಭಾರತ) ಸಂಸ್ಥೆಯಲ್ಲಿ ಡೈರೆಕ್ಟರ್ (ಟ್ಯಾಲೆಂಟ್ ಡೆವಲೆಪ್‍ಮೆಂಟ್) ಹುದ್ದೆಯಲ್ಲಿದ್ದಾರೆ. ಇದಕ್ಕೆ ಮುಂಚೆ ಅವರು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದರು. ಕಂಟ್ರೋಲ್‍ನೆಟ್ ಇಂಡಿಯಾ ಸಂಸ್ಥೆಯಲ್ಲಿ  ಒಂದು ವರ್ಷ  ವೈಸ್ ಪ್ರೆಸಿಡೆಂಟ್ (ಟ್ರೈನಿಂಗ್) , ಸದರ್ನ್ ಕ್ಯಾಲಿಫೋರ್ನಿಯಾ ...

READ MORE

Related Books