About the Author

.ಸಿ.ಪಿ. ರವಿಕುಮಾರ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮತ್ತು ನ್ಯಾಷನಲ್ ಹೈಸ್ಕೂಲಿನಲ್ಲಿ ಅವರು ಪ್ರೌಢಶಾಲಾ ಶಿಕ್ಷಣ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಬಿಇ ಪದವೀಧರರು, ಭಾರತೀಯ ವಿಜ್ಞಾನ ಸಂಸ್ಥೆಯಿಂದ  ಕಂಪ್ಯೂಟರ್ ವಿಜ್ಞಾನದಲ್ಲಿ ಎಂಇ ಪದವೀಧರರು, ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯುತ್ ಇಂಜಿನಿಯರಿಂಗ್ ಸಿಸ್ಟಮ್ಸ್ ವಿಭಾಗದಿಂದ ಕಂಪ್ಯೂಟರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪಿಎಚ್.ಡಿ. ಪದವೀಧರರು. 

ಪ್ರಸಕ್ತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ (ಭಾರತ) ಸಂಸ್ಥೆಯಲ್ಲಿ ಡೈರೆಕ್ಟರ್ (ಟ್ಯಾಲೆಂಟ್ ಡೆವಲೆಪ್‍ಮೆಂಟ್) ಹುದ್ದೆಯಲ್ಲಿದ್ದಾರೆ. ಇದಕ್ಕೆ ಮುಂಚೆ ಅವರು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದರು. ಕಂಟ್ರೋಲ್‍ನೆಟ್ ಇಂಡಿಯಾ ಸಂಸ್ಥೆಯಲ್ಲಿ  ಒಂದು ವರ್ಷ  ವೈಸ್ ಪ್ರೆಸಿಡೆಂಟ್ (ಟ್ರೈನಿಂಗ್) , ಸದರ್ನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಸಂಶೋಧಕರಾಗಿ ಮತ್ತು ಅತಿಥಿ ಸಂಶೋಧಕರಾಗಿದ್ದರು. ಇನ್ಫೋಸಿಸ್ ಬೆಂಗಳೂರಿನಲ್ಲಿ ಮತ್ತು ಪ್ರೊಸೆಸರ್ ಸಿಸ್ಟಮ್ಸ್ ಇಂಡಿಯಾ ಬೆಂಗಳೂರು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಅವರು "ಜನಮುಖಿ ತಂತ್ರಲೋಕ" ಎಂಬ ಅಂಕಣಕಾರರು. ರವಿ ಕಾಣದ್ದು, ಸಿಪಿ ಸಂಪದ, ಕನ್ನಡ ಬರಹದ ಇಂಗ್ಲಿಷ್ ಅನುವಾದಗಳು, ಹಿಂದಿ ಬರಹಗಳ ಇಂಗ್ಲಿಷ್ ಅನುವಾದಗಳು, ಸ್ವತಂತ್ರ ಇಂಗ್ಲಿಷ್ ಬರಹಗಳು ಹೀಗೆ ವಿವಿಧ ಬ್ಲಾಗ್ ಗಳನ್ನು ಬರೆಯುತ್ತಿದ್ದಾರೆ. 

ಕೃತಿಗಳು:  ‘ದಂತಪಂಕ್ತಿ’ (ಕವನ ಸಂಕಲನ), ನವಕರ್ನಾಟಕ ಸಂಸ್ಥೆಯ "ವಿಶ್ವಕಥಾಕೋಶ" ಮಾಲಿಕೆಯಲ್ಲಿ "ಕಾಡಿನಲ್ಲಿ ಬೆಳದಿಂಗಳು" (ಅನುವಾದಿತ ಕತೆಗಳ ಸಂಗ್ರಹ)  ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ "ಮೌಲಾನಾ ಅಬ್ದುಲ್ ಕಲಾಂ ಆಜಾದ್" (ಜೀವನಚರಿತ್ರೆ), ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸರ್ವೇಶ್ವರ ದಯಾಲ್ ಸಕ್ಸೇನಾ ಅವರ "ಬಕರಿ" (ನಾಟಕ), "ಕುರಿ" ಹೆಸರಿನಲ್ಲಿ ಅನುವಾದಿಸಿದ್ದಾರೆ; 

ಪ್ರಶಸ್ತಿ-ಪುರಸ್ಕಾರಗಳು: ಸಿ.ಪಿ. ರವಿಕುಮಾರ ಅವರಿಗೆ ವಿಎಲ್ ಎಸ್ ಐ ಸಮ್ಮೇಳನದಲ್ಲಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿ, ವಿಟಿಎಸ್ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. 

ಸಿ. ಪಿ. ರವಿಕುಮಾರ್

Books by Author