‘ಪತ್ಮಂದೆ’ ಲೇಖಕ ಅನು ಬೆಳ್ಳೆ ಅವರ ಕಿರುಕಾದಂಬರಿ. ಒಂದು ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಅದರ ಸುತ್ತ ನಡೆಯುವ ಸ್ಥಳೀಯ ರಾಜಕೀಯ ಹುತ್ತದ ರಹಸ್ಯ ವಿದ್ಯಮಾನಗಳನ್ನು ಕುತೂಹಲ, ಆತಂಕಗಳ ಮೂಲಕ ತೆರೆಯುತ್ತಾ ಹೋಗುವ ಒಂದು ವಿಶಿಷ್ಟ ಕಥನ.
ಪಾರಿಜಾತಳ ಆತಂಕ ಮತ್ತು ಕುತೂಹಲದಿಂದ ಆರಂಭವಾಗುವ ಕಾದಂಬರಿಯು ಅಚ್ಚಪ್ಪಣ್ಣನ ಬಗೆಗಿನ ಅವಳ ಒಲವಿನ ಅಪೇಕ್ಷೆಯ ಜೊತೆಗೆ ಆಶಾ ಕಾರ್ಯಕರ್ತೆ ಗುಲಾಬಿ ಮತ್ತು ಅಚ್ಚಪ್ಪನ ನಡುವಿನ ಸಂಬಂಧದ ಅನುಮಾನದೊಂದಿಗೆ ಬೆಳೆಯುತ್ತಾ ಹೋಗುತ್ತದೆ. ಒಂದು ಸರಳ ತ್ರಿಕೋನ ಪ್ರೇಮದ ಕತೆಯಾಗಬಹುದಾಗಿದ್ದ ಕೃತಿಯನ್ನು ಅನು ಬೆಳ್ಳೆಯವರು ಸಾಮಾಜಿಕ ಕಳಕಳಿಯ ಕಥನವನ್ನಾಗಿ ರೂಪಾಂತರಿಸಿದ್ದಾರೆ.
ಅನು ಬೆಳ್ಳೆ ಅವರರ ಕಾದಂಬರಿಯ ಕಥನ ಶೈಲಿಯಲ್ಲಿ ಆಡುನುಡಿಯ ನುಡಿಗಟ್ಟುಗಳು, ದೇಸಿ ಬದುಕಿನ ನೈಜ ಚಿತ್ರಣಗಳು, ವ್ಯಂಗ್ಯ ವಿಡಂಬನೆಯ ಲಹರಿಯ ವರ್ಣನೆಗಳು, ಭಾವನೆಗಳನ್ನು ಚಿತ್ರಕ ಭಾಷೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಡುವ ವಿವರಗಳು ಗಮನ ಸೆಳೆಯುತ್ತವೆ.
ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಅನು ಬೆಳ್ಳೆ ಅವರು ಮೂಲತಃ ಉಡುಪಿ ಜಿಲ್ಲೆಯ ಬೆಳ್ಳೆಯವರಾಗಿದ್ದು ಹುಟ್ಟಿದ್ದು ತಮಿಳುನಾಡಿನ ಮಧುರೈನಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪಡುಬೆಳ್ಳೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇನ್ನಂಜೆಯ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜ್ ನಲ್ಲಿ ಮುಗಿಸಿದ್ದರು. ಶಿರ್ವದ ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜಿನಲ್ಲಿ ಪದವಿಯನ್ನು ಪಡೆದು, ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಯನ್ನು ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಕನ್ನಡದ ಬಹುತೇಕ ಪತ್ರಿಕಗಳಲ್ಲಿ ಇವರ ಕಥೆ, ಕಾದಂಬರಿಗಳು ಪ್ರಕಟಗೊಂಡಿವೆ. ಈವರೆಗೆ ಐವತ್ತು ಕೃತಿಗಳನ್ನು ...
READ MORE'ಪತ್ಮಂದೆ'. ಕಾದಂಬರಿಯ ಕುರಿತು ಲೇಖಕ ಅನು ಬೆಳ್ಳೆ ಅವರ ಮಾತುಗಳು ಇಲ್ಲಿವೆ.