`ಪಸರಿಸಿದ ಶ್ರೀಗಂಧ’ ಕೃತಿಯು ಸಾಯಿಸುತೆ ಅವರ ಸಾಮಾಜಿಕ ಕಾದಂಬರಿಯಾಗಿದೆ. 1993ರಲ್ಲಿ ಮೊದಲನೇಯದಾಗಿ ಮುದ್ರಣಗೊಂಡ ಈ ಕಾದಂಬರಿಯು 2005 ರಲ್ಲಿ ಎರಡನೇ ಮುದ್ರಣ, 2012 ರಲ್ಲಿ ,ಮೂರನೇಯ ಮುದ್ರಣ ಹಾಗೂ 2021 ರಲ್ಲಿ ನಾಲ್ಕನೇ ಮುದ್ರಣವನ್ನು ಕಂಡಿದೆ. ಈ ಕೃತಿಯಲ್ಲಿನ ವಿಚಾರವನ್ನು ಲೇಖಕಿ ಸಾಯಿಸುತೆ ಬೆನ್ನುಡಿಯಲ್ಲಿ ಗಾದೆಯ ಮುಖೇನ ವಿವರಿಸುತ್ತಾ ಮೀನು ನೀರಿನಲ್ಲಿರುವ ಕೊಳಕನ್ನು ತಿಂದು ನೀರನ್ನು ಶುದ್ದೀಕರಿಸುತ್ತದೆ. ಆದರೆ ಸ್ವಾರ್ಥಿಗಳು ತಮ್ಮ ಕೊಳಕನ್ನೆಲ್ಲ ಸಮಾಜದಲ್ಲಿ ಹರಡುತ್ತ ಗೊಂದಲವೆಬ್ಬಿಸುತ್ತಾರೆ. ಇದೆಲ್ಲದರ ನಡುವೆ ಪ್ರಕೃತಿ ಅದೋ ವಸಂತ, ಇದೋ ಗ್ರೀಷ್ಮ, ಮುಂದೆ ಶರತ್ ಎನ್ನುತ್ತ ಸಂಗೀತ, ಸಾಹಿತ್ಯ, ಸಂಸ್ಕೃತಿಯು ಹಚ್ಚುವ ಹಣತೆಗಳ ನಡುವೆ ಎಲ್ಲಾ ಪಾತ್ರಗಳು, ಬದುಕಿನ ವೈಶಿಷ್ಟ್ಯಗಳಾಗಿವೆ’ ಎನ್ನುತ್ತಾರೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE