ಪರಂಪರೆ (ಕಾದಂಬರಿ)

Author : ನಿಡಸಾಲೆ ಪುಟ್ಟಸ್ವಾಮಯ್ಯ

Pages 152

₹ 100.00




Year of Publication: 2015
Published by: ಗೀತಾಂಜಲಿ ಪಬ್ಲಿಕೇಷನ್ಸ್
Address: # 60, 2D ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗಬಾವಿ, ಬೆಂಗಳೂರು-560072

Synopsys

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಸಾಮಾಜಿಕ ಕಾದಂಬರಿ-ಪರಂಪರೆ. ಖ್ಯಾತ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಈ ಕಾದಂಬರಿಯು ಜಾತಿ-ಮಥ-ಧರ್ಮ-ಸಂಪ್ರದಾಯಾಚರಣೆಗಳನ್ನು ಒಳಗೊಂಡ ವಿಭಿನ್ನ ವಸ್ತುವನ್ನು ಹೊಂದಿದ್ದು, ಸರಳ ನಿರೂಪಣೆಯೊಡನೆ ಓದಿಗರ ಮನವನ್ನು ಗೆಲ್ಲುವ, ಪರಿಯಲ್ಲಿ ರಚಿತವಾಗಿದೆ. ಆರಂಭದಲ್ಲಿ ನಗರ ಪರಿಸರ, ಸಂಪ್ರದಾಯ, ಅಂಧಶ್ರದ್ಧೆ ಆಚರಣೆ ಮಾಡುವ ಪಾತ್ರಗಳು ಕಂಡುಬಂದರೆ, ಗ್ರಾಮೀಣ ಪರಿಸರಕ್ಕೆ ಜಿಗಿಯುವ ಅಲ್ಲಿಯೂ ಜಾತಿ ಸಂಪ್ರದಾಯಗಳ ಸಂಘರ್ಷ ನಡೆಯುವ, ನಾಸ್ತಿಕವಾದವೂ ಇಣುಕುವ, ದೇವರು, ಪೂನೆ, ಪುನಸ್ಕಾರಗಳಲ್ಲಿ ಕಂಡುಬರುವ ನಂಬಿಕೆಯ ವೈಪರಿತ್ಯಗಳನ್ನೆಲ್ಲ ಕಾದಂಬರಿಕಾರರು ನೈಜವಾಗಿ ನಿರೂಪಿಸಿರುವುದು ಕಾದಂಬರಿಗೆ ಪುಷ್ಠಿ ತಂದು ಕೊಟ್ಟಿದೆ’; ಎಂದು ಪ್ರಶಂಸಿಸಿದ್ದಾರೆ.

About the Author

ನಿಡಸಾಲೆ ಪುಟ್ಟಸ್ವಾಮಯ್ಯ
(05 February 1951)

ಲೇಖಕ ನಿಡಸಾಲೆ ಪುಟ್ಟಸ್ವಾಮಯ್ಯ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಿಡಸಾಲೆ (ಜನನ: 05-02-1951) ಗ್ರಾಮದವರು. ತಂದೆ- ಮುಳವಾಗಲಯ್ಯ, ತಾಯಿ- ನಿಂಗಮ್ಮ. ನಿಡಸಾಲೆಯಲ್ಲಿ ಪ್ರಾಥಮಿಕ, ಹುಲಿಯೂರುದುರ್ಗದಲ್ಲಿ ಪ್ರೌಢಶಾಲೆಯವರೆಗೆ ವ್ಯಾಸಂಗ ಪೂರ್ಣಗೊಳಿಸಿದರು. 1968ರಲ್ಲಿ ಬೆಂಗಳೂರಿನ ಐ.ಟಿ.ಐ.ನಲ್ಲಿ ತರಬೇತಿ ಪಡೆದು, 1969ರಿಂದ ಕೃಷಿ ಇಲಾಖೆಯಲ್ಲಿ ಉದ್ಯೋಗ ಆರಂಭಿಸಿದರು. ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಪಿ.ಯು.ಸಿ ತೇರ್ಗಡೆ ಯಾಗಿ ಬಿ.ಕಾಂ.ಗೆ ಸೇರ್ಪಡೆಯಾದರು. ಹಿರಿಯ ಸಾಹಿತಿ ಬಿ.ಜಿ. ಸತ್ಯಮೂರ್ತಿಯವರ ಒಡನಾಟದಲ್ಲಿ 1971ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು ಸಣ್ಣ ಕಥೆ, ನಾಟಕ, ಕಾದಂಬರಿ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ.  ಕೃತಿಗಳು: ಗೊಲ್ಲಳ್ಳಿ ತೋಟ’, ‘ಸಾಧನೆಯ ...

READ MORE

Related Books