'ಒಳದನಿ' ಕಾವ್ಯ, ಕೃತಿ, ವಿಮರ್ಶೆ ಮತ್ತು ಸಂಸ್ಕೃತಿ ಕುರಿತ ಬರಹಗಳಾಗಿದ್ದು ಲೇಖಕ ಎಸ್.ಆರ್ ವಿಜಯಶಂಕರ್ ರಚಿಸಿದ್ದಾರೆ. ಕೃತಿಯ ಬೆನ್ನಡಿಯಲ್ಲಿ ಕಾವ್ಯ, ಕೃತಿ, ವಿಮರ್ಶೆ ಮತ್ತು ಸಂಸ್ಕೃತಿ ಮೊದಲಾದ ವಿಷಯಗಳನ್ನು ಕುರಿತು ಎಸ್.ಆರ್. ವಿಜಯಶಂಕರ ಅವರು ಈಚಿನ ವರ್ಷಗಳಲ್ಲಿ ಬರೆದ ಹಲವಾರು ಲೇಖನಗಳು ಈ ಸಂಕಲನದಲ್ಲಿ ಸೇರಿವೆ. “ಒಳದನಿ' – ಎಂಬ ತಲೆಬರಹವುಳ್ಳ ಈ ಸಂಕಲನವು ಹಲವಾರು ರೀತಿಯ ಒಳದನಿಗಳನ್ನು ತನ್ನೊಳಗೆ ಇರಿಸಿಕೊಂಡಿದೆ. ಮೊದಲನೆಯದಾಗಿ, ಕೃತಿಯ ಒಳಗೇ ಅಡಗಿರುವ ಹಲವಾರು ಸ್ತರದ ಒಳದನಿಗಳನ್ನು ಕೃತಿನಿಷ್ಠ ವಿಮರ್ಶೆಯ ಸೂಕ್ಷ್ಮ ಕಣ್ಣಿನಿಂದ ಇಲ್ಲಿಯ ಹಲವು ಬರಹಗಳು ಅನಾವರಣಗೊಳಿಸುತ್ತವೆ. ಎರಡನೆಯದಾಗಿ, ಒಂದೊಂದು ಕೃತಿಯ ಮೂಲಕ ವಿಶಾಲ ಸಂಸ್ಕೃತಿಯು ಯಾವೆಲ್ಲ ಒಳದನಿಗಳನ್ನು ಹೊರಡಿಸುತ್ತಿರಬಹುದು ಎಂಬ ಬಗ್ಗೆಯೂ ಇಲ್ಲಿಯ ಕೆಲವು ಬರಹಗಳು ಪರಿಶೀಲನೆಗೆ ತೊಡಗುತ್ತವೆ. ಮತ್ತು, ಎಲ್ಲಕ್ಕಿಂತ ಮುಖ್ಯವಾಗಿ ಕೃತಿಯನ್ನು ಎದುರಾಗಿಟ್ಟುಕೊಂಡು ಅನುಸಂಧಾನಕ್ಕೆ ತೊಡಗುವ ಒಬ್ಬ ಕ್ರಿಯಾಶೀಲ ವಿಮರ್ಶಕ ತನ್ನೊಳಗೇ ಅಡಗಿರುವ ಕೆಲವು ಒಳದನಿಗಳನ್ನು ಈ ಕೃತಿಯಲ್ಲಿ ಕಂಡುಕೊಳ್ಳುಬಹುದಾಗಿದೆ. ಹೇಗೆ ಸಾಧ್ಯ ಎಂಬುದರ ಕಡೆಗೂ ಇಲ್ಲಿಯ ಒಂದೆರಡು ಲೇಖನಗಳು ಬೊಟ್ಟು ಮಾಡಿ ತೋರಿಸುವಂತಿವೆ. ಈ ದೃಷ್ಟಿಯಿಂದ, ಹಲವಾರು ಒಳದನಿಗಳನ್ನು ಕೂಡಿಸಿಕೊಂಡಿರುವ ಬಹುಧ್ವನಿಯೊಂದು ಈ ಸಂಕಲನದಲ್ಲಿ ನಮಗೆ ಗೋಚರವಾಗುತ್ತದೆ ಎಂದು ಕೃತಿಯ ಕುರಿತು ಬೆನ್ನಡಿಯಲ್ಲಿ ವಿವರಿಸಲಾಗಿದೆ.
ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ, ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ. ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ. ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...
READ MORE