ಲೇಖಕಿ ಸರಿತಾ ಜ್ಞಾನಾನಂದ ಅವರು ಕನ್ನಡಕ್ಕೆ ಅನುವಾದಿಸಿರುವ ಕಾದಂಬರಿ ಒಬ್ಬ ರಾಧೆ ಕೃಷ್ಣರಿಬ್ಬರು. ಈ ಕಾದಂಬರಿಯು ಯಂಡಮೂರಿ ವೀರೇಂದ್ರನಾಥ್ ಅವರಿಂದ ಮೂಲದಲ್ಲಿ ರಚನೆಯಾಗಿದ್ದು, ಕನ್ನಡಕ್ಕೆ ಅನುವಾದಗೊಂಡಿದೆ. 2016ರಲ್ಲಿ ಈ ಕೃತಿಯು ನಾಲ್ಕನೇ ಮುದ್ರಣವನ್ನು ಕಂಡಿದೆ.
ಸರಿತಾ ಜ್ಞಾನಾನಂದ ಅವರು ಮೂಲತಃ ಬೆಂಗಳೂರಿನವರು. ತಂದೆ- ಎನ್. ಆರ್. ನಂಜುಂಡಸ್ವಾಮಿ, ತಾಯಿ- ಸುಬ್ಬಮ್ಮ. 21-01-1943ರಲ್ಲಿ ಜನಿಸಿದ ಅವರು ಅಧ್ಯಾಪಕ ವೃತ್ತಿಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸರಿತಾ ಜ್ಞಾನಾನಂದ ಅವರು ಒಂದೂರಲ್ಲಿ ಒಬ್ಬ ನಿರ್ಮಲಾ, ಪರಿಪೂರ್ಣ, ತನ್ನ ಮೀನು-ತಾನಾದ, ಬೆಂಕಿ ಹೂ, ಪಾಕಿಸ್ತಾನದಲ್ಲಿ ಶಂಕರ್ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ ಕೃಷಿ ಮಾಡಿರುವ ಅವರು ವಿದಾಯ, ವಿಷಗರ್ಭ, ಪ್ರಕೃತಿ ಸಂಶೋಧನೆ ಸೇರಿದಂತೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ಜೊತೆಗೆ ಹೆಣ್ಣೆ ಹೆಚ್ಚು ಎಂಬ ನಾಟಕನ್ನು ರಚಿಸಿರುವ ಅವರು ಆಚಾರ್ಯಾಭಿವಂದನೆ, ಕಲಾರಾಧನೆ ...
READ MORE