‘ನ್ಯಾನ್ಸಿ’ ಪತ್ರಕರ್ತೆ, ಲೇಖಕ ಸುಶೀಲಾ ಡೋಣೂರ ಅವರ ಕಾದಂಬರಿ. ಈ ಕೃತಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಬೆನ್ನುಡಿ ಬರೆದು ‘ಕಾದಂಬರಿಯ ನಾಯಕಿ ನ್ಯಾನ್ಸಿ ನೃತ್ಯಗಾರ್ತಿಯಷ್ಟೇ ಅಲ್ಲ: ಪ್ರಸಿದ್ಧ ಮಾಡೆಲ್. ಊಹೆಗೆ ನಿಲುಕದಷ್ಟು ಪ್ರಸಿದ್ಧಿಯನ್ನು ಪಡೆದ ಮಾಡೆಲ್. ಮಾಡೆಲಿಂಗ್ ಲೋಕದ ವಿವರಗಳು ನ್ಯಾನ್ಸಿಯ ನಡೆಯೊಂದಿಗೇ ತೆರೆದುಕೊಳ್ಳುವುದು ಈ ಕಾದಂಬರಿಯ ಒಂದು ವಿಶೇಷ. ಈ ದೃಷ್ಟಿಯಿಂದ ಸುಶೀಲಾ ಡೋಣೂರ ಅವರು ಕನ್ನಡ ಕಥಾಸಾಹಿತ್ಯಕ್ಕೆ ಬಹುಪಾಲು ಅಪರಿಚಿತವಾದ, ಹೊಸದಾದ ಒಂದು ವಲಯವನ್ನು ಅನಾವರಣಗೊಳಿಸುತ್ತಾರೆ. ಬೆಚ್ಚಿ ಬೀಳುವಂತಹ ವಿವರಗಳನ್ನು ಹಾಗೂ ದೇಶ-ವಿದೇಶದ ಮಾಡಲಿಂಗ್ ಲೋಕ ಮತ್ತು ಮೈ-ಮನಸ್ಸುಗಳ ಆಂತರಿಕ ಲೋಕವನ್ನು ಒಟ್ಟಿಗೆ ಕಟ್ಟಿಕೊಡುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
ಈ ಕೃತಿಗೆ ಲೇಖಕಿಯರ ಸಂಘದ ತ್ರಿವೇಣಿ ದತ್ತಿ ನಿಧಿ ಪ್ರಶಸ್ತಿ, ಕರ್ನಾಟಕ ಸಂಘದಿಂದ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾರತೀಸುತ ಪ್ರಶಸ್ತಿಗಳು ಲಭಿಸಿವೆ.
’ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕಿ ಆಗಿರುವ ಸುಶೀಲಾ ಡೋಣೂರು ಅವರು ಅಭಿವ್ಯಕ್ತಿಗಾಗಿ ಕತೆ-ಕಾದಂಬರಿ ರಚಿಸುತ್ತಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಸುಶೀಲಾ ಅವರು ಸದ್ಯ ಬೆಂಗಳೂರು ನಿವಾಸಿ. ...
READ MORE