ಒಂದು ಕುಟುಂಬದ ಜವಾಬ್ದಾರಿ ಹೊತ್ತ ಮನುಷ್ಯ ತನ್ನವರಿಗೆ ಧೃಢವಾದ ಬೇಲಿಯಾಗಬೇಕು. ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾದ ಹಿರಿಯ ಸದಸ್ಯನೆ ವಂಚನೆ, ಕಾಮುಕ ಭಾವನೆ, ದ್ರೋಹ ಮನೋಭಾವನೆಗೆ ಇಳಿದಾಗ ಕುಟುಂಬದಲ್ಲಿ ಆಗುವ ಶೋಷಣೆ ಮತ್ತು ದಾರುಣತೆಯನ್ನು ‘ನೂಲಿನ ಬೇಲಿ’ ಕಾದಂಬರಿ ವಿವರಿಸುತ್ತದೆ.
“ಅರ್ಚನೆ ಪೂಜನೆ ನೇಮವಲ್ಲ. ಮಂತ್ರತಂತ್ರ ನೇಮವಲ್ಲ ಧೂಪ ದೀಪಾರತಿ ನೇಮವಲ್ಲ; ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೇ ನೇಮ” ಎಂಬ 12ನೇ ಶತಮಾನದ ಶರಣೆ ಸತ್ಯಕ್ಕಳ ವಚನ ಸಾಲುಗಳ ಆಶಯವೇ 21ನೇ ಶತಮಾನದ 'ನೂಲಿನ ಬೇಲಿ’ ಕಾದಂಬರಿಯ ವಸ್ತು ಹಾಗೂ ಆಶಯವೂ ಆಗಿದೆ. ಬದುಕು ಇರುವುದು ಬಾಳುವುದಕ್ಕಾಗಿ ಇತರರನ್ನು ನೋಯಿಸಲು ಅಲ್ಲ ಎಂಬ ಸಂದೇಶವೂ ಒಳಗೊಂಡಿದೆ.
ಲೇಖಕ ಮುದಲ್ ವಿಜಯ್ ಮೂಲತಃ ತಮಿಳುನಾಡಿನವರು. ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಕಡಲಿನಾಳದ ಕವನ’ ಕವನ ಸಂಕಲನ ಆಡಿಯೋ ರೂಪದಲ್ಲಿ ಹೊರ ಬಂದಿದೆ. ‘ಜವುಗು’, ‘ನೂಲಿನ ಬೇಲಿ’ ಅವರ ಮತ್ತಿತರ ಕವನ ಸಂಕಲನಗಳು. ...
READ MOREನೂಲಿನ ಬೇಲಿ
ಮುದಲ್ ವಿಜಯ್ ಇದು ಲೇಖಕರ ಮೂರನೆಯ ಕಾದಂಬರಿ, ನಾಲ್ಕಾರು ಕವನ ಸಂಕಲನಗಳನ್ನೂ ಹೊರತಂದಿರುವ ಮುದಲ್ ವಿಜಯ್ ಅವರು, ವಿವಿಧ ಆಯಾಮಗಳಲ್ಲಿ ಕುತೂಹಲ ಹುಟ್ಟಿಸುವ ಸಾಹಿತಿ, ಮುದಲ್ ವಿಜಯ್ ಅವರ ಮನೆ ಮಾತು ತಮಿಳು. ಈ ಕಾದಂಬರಿಯ ಮುನ್ನುಡಿಯಲ್ಲಿ ಗುರುತಿಸಿರುವಂತೆ, ಇವರು ಬಡತನದಲ್ಲಿ ಬಾಲ್ಯ ವನ್ನು ಕಳೆದು, ತಾಯಿಯ ಸಹಕಾರದಿಂದ ವಿದ್ಯಾಭ್ಯಾಸ ಪಡೆದು, ಸ್ವಂತ ಪ್ರಯತ್ನದಿಂದ ಉದ್ಯಮಿಯಾಗಿದ್ದಾರೆ. ತಮಿಳು ಮನೆಮಾತು ಹೊಂದಿರುವ, ಉದ್ಯಮಿಯೊಬ್ಬರು, ದಲವು ಕನ್ನಡ ಸಾಹಿತ್ಯ ಕೃತಿಯನ್ನು ಹೊರತರುತ್ತಿರುವ ವಿಚಾರವೇ ವಿಸ್ಮಯ ಹುಟ್ಟಿಸುವಂತಹದ್ದು. ನಿರೂಪಕರು ಮೂವತ್ತೈದು ವರ್ಷಗಳ ಹಿಂದೆ ಬಾಲ್ಯಾವಸ್ಥೆಯಲ್ಲಿ ತಾವು ಕಂಡ ಅನುಭವಗಳಿಗೆ ನಿರ್ಭಿಡೆಯಾಗಿ ಅಕ್ಷರ ರೂಪ ನೀಡಿ, ಕಾವ್ಯ ಪ್ರೀತಿಯಂತೆ ಕಾದಂಬರಿಯಲ್ಲೂ ಒಲವು ತೋರಿ ಒಳ್ಳೆಯ ಕಾದಂಬರಿ ಕಾರರಾಗುವ ವಿಶ್ವಾಸವನ್ನು ಸಾಬೀತು ಪಡಿಸಿದ್ದಾರೆ.' (ಮುನ್ನುಡಿಯಲ್ಲಿ ಡಾ| ಮಲರ್ ವಿಳಿ ಕೆ), ಉತ್ತಮ ಮುದ್ರಣ, ಅರ್ಥಪೂರ್ಣ ಮುಖಪುಟ ಹೊಂದಿರುವ ಈ ಕಾದಂಬರಿ, ಈ ಮೇಲಿನ ಕಾರಣಗಳಿಗೆ ಗಮನ ಸೆಳೆಯುತ್ತದೆ.
- ಶಶಿಧರ ಹಾಲಾಡಿ
ಕೃಪೆ : ವಿಶ್ವವಾಣಿ (2020 ಫೆಬ್ರುವರಿ 23)