ಲೇಖಕ ಭಿ.ಪ. ಕಾಳೆ ಅವರು ಬರೆದ ಕಾದಂಬರಿ-ನೇತಾಜಿ ಅಥವಾ ಶಿವಾಜಿಯ ಬಲಗೈ. ಪ್ರಸ್ತುತ ಈ ಕಾದಂಬರಿಯು ನಾಲ್ಕನೇ ಮುದ್ರಣವಾಗಿದೆ. ಶಿವಾಜಿ ಮಹಾರಾಜರ ಬಲಗೈ ಬಂಟ ಎಂದೇ ಹೆಸರಾಗಿದ್ದ ನೇತಾಜಿಯ ಶೌರ್ಯ-ಸಾಹಸಗಳು ಈ ಕಾದಂಬರಿಯ ಮೂಲ ವಸ್ತು. ಐತಿಹಾಸಿಕವಾಗಿ ಮಹತ್ವದ ಪಾತ್ರವಹಿಸಿದ್ದ ಕಾಶಿ ಹಾಗೂ ಗಂಗೂ ಅವರ ಉಜ್ವಲ ಪಾತಿವ್ರತ್ಯದ ಪ್ರಭಾವವನ್ನೂ ರುಸ್ತುಂ ಫಕೀರರ ಪಾತ್ರವನ್ನು ಇಲ್ಲಿ ಚಿತ್ರಿಸಲಾಗಿದೆ.
ಭಿಕಾಜಿಪಂತ ಕಾಳೆ ಎಂಬುದು ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ. ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...
READ MORE