ಲೇಖಕಿ ವಸುಮತಿ ಉಡುಪ ಅವರ ಕಾದಂಬರಿ ನಾನು ನೀವಾಗಿರಬಹುದು. ಅಂಕಿತ ಪುಸ್ತಕ 844ನೆಯ ಪ್ರಕಟಣೆ ಇದಾಗಿದೆ. ಕೃತಿಯಲ್ಲಿ ಲೇಖಕಿಯೇ ಹೇಳಿರುವಂತೆ, ಬದುಕು ಅನ್ನುವುದು ಯಾವತ್ತೂ, ಯಾರ ತೆಕ್ಕೆಗೂ ನಿಲುಕದ ನಿಗೂಢ. ಯಾವ ತಪ್ಪೂ ಇಲ್ಲದೆ ಕೆಲವರ ಪಾಲಿಗೆ ವಿಧಿ ವಿನಾಕಾರಣ ಯಾಕೆ ಕ್ರೂರವಾಗಿರುತ್ತದೆ ಎನ್ನುವುದು ಮನುಷ್ಯ ಮಾತ್ರರ ಗ್ರಹಿಕೆಗೆ ಸಿಗದ ರಹಸ್ಯ. ವರ ಅಂದುಕೊಂಡಿದ್ದು ಶಾಪವಾಗುವುದು, ಶಾಪ ಅಂದುಕೊಂಡಿದ್ದು ವರವಾಗುವುದು ಜೀವನದ ಚ್ಯೋದ್ಯ. ವಾಸ್ತವಕ್ಕೆ ಹತ್ತಿರವಾಗುತ್ತಿರುವ ವಸ್ತುವನ್ನು ಇಟ್ಟುಕೊಂಡು ಈ ಕಾದಂಬರಿಯನ್ನು ಬರೆದಿದ್ದೇನೆ. ಕಾಲ ಎಷ್ಟೇ ಮುಂದುವರಿದಿದೆ ಅಂದುಕೊಂಡರೂ ಕೆಲವೊಂದು ಸಂದರ್ಭಗಳು, ಪರಿಸ್ಥಿತಿ, ಭವಿಷ್ಯದ ಆತಂಕ ದಿಟ್ಟ ನಿರ್ಧಾರ ಕೈಗೊಳ್ಳಲು ಹೇಗೆ ಹಿಂದೆಗೆಯುವಂತೆ ಮಾಡುತ್ತದೆ ಎನ್ನುವುದನ್ನು ಕಾದಂಬರಿ ಚಿತ್ರಿಸುತ್ತದೆ ಎಂದಿದ್ದಾರೆ.
ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ. ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...
READ MORE