ನನ್ನೆದೆಯ ಹಾಡು ' ಸ್ವಲ್ಪ ಭಿನ್ನವಾದ ಕಥೆ.ವಿಷ್ಣು ತಂದೆ ಸಂಪತ್ತಗಿರಿ ಅವರಿಗೆ ಒಬ್ಬನೇ ಮಗ.ತಾಯಿ ಇಲ್ಲದವ, ತಂದೆ,ಅಜ್ಜಿಯ ಆರೈಕೆಯಲ್ಲಿ ಬೆಳೆದವ.ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಪ್ರೀತಿ.ಮಗನೆಂದರೆ ಮಮತೆ, ಮನೆಯಲ್ಲಿ ಅವನ ಇಚ್ಛೆಯಂತೆ ನಡೆಯಬೇಕು.ವಿಷ್ಣು ಬಾಲ್ಯ ಕಳೆದು ಕಾಲೇಜ್ ಓದುತ್ತಿದ್ದ.ಆ ಊರಿನಲ್ಲಿ ಒಂದು ಹಳೆಯ ವಿಷ್ಣು ದೇವಾಲಯ ಇತ್ತು.ಅಲ್ಲಿ ಪೂಜೆ ಮಾಡುವ ಭಟ್ಟ, ರಾದ್ಧಾಂತ ಮಾಡಿದ್ದ.ಬೇರೆ ಊರಿನಿಂದ ಬಂದ ತಂದೆ, ಮಗಳಿಗೆ ಅವರು ತಮ್ಮ ಮನೆಯ ಎದುರು ಇರುವ ಮನೆಯಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಿದ್ದರು.ಆ ಬಾಲೆ 16ರ ಸುಂದರಿ ಶ್ರೀದೇವಿ.ಹಾಡಿನಲ್ಲಿ ತುಂಬಾ ಆಸಕ್ತಿ ಹೊಂದಿದವಳು.ಕಾಲೇಜು ರಜೆಯಲ್ಲಿ ವಿಷ್ಣು ಊರಿಗೆ ಬಂದಿದ್ದ.ಶ್ರೀದೇವಿ ಪರಿಚಯವಾಗಿ ಇಬ್ಬರೂ ಕೂಡ ಒಳ್ಳೆಯ ಸ್ನೇಹಿತರಾದರು.ವಿಷ್ಣುಗೆ ಕವನ ಬರೆಯೋ ಹುಚ್ಚು.ಅದನ್ನ ಶ್ರೀದೇವಿ ರಾಗವಾಗಿ ಹಾಡುತಿದ್ದಳು.ಮಧ್ಯಂತರದಲ್ಲಿ ಏನೇನೋ ಒಂದಿಷ್ಟು ಘಟನೆ ಘಟಿಸಿದವು. ಆ ಘಟನೆಗಳಾವುವು. ವಿಷ್ಣು ಮತ್ತು ದೇವಿಯನ್ನು ಮದುವೆಯಾಗುವಂತೆ ಮಾಡಿದ ಆ ಘಟನೆಯವುದು? ಎಲ್ಲದಕ್ಕೂ ಉತ್ತರ ಕಾದಂಬರಿಯಲ್ಲಿದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE