'ನನ್ನವರಾರಿಲ್ಲಿ ?' ಸ್ವಾತಿ.ಕೆ ಅವರ ಕೃತಿಯಾಗಿದೆ. ಇದೊಂದು ಹರಿಹರೆಯದ ವಯಸ್ಸಿನ ಮನಸ್ಸುಗಳ ಮಿಡಿತದ ಕತೆ. ಆ ಮನಸ್ಸುಗಳ ಏರಿಳಿತಕ್ಕೂ ಅವರ ವಯಸ್ಸಿಗೂ ಸಾಮ್ಯತೆ ಕತೆಯ ಪ್ರಾರಂಭದಿಂದಲೂ ಓದುಗರ ಗಮನ ಸೆಳೆಯುವಂತಿದೆ. ಒಬ್ಬ ಹುಡುಗಿ ತನ್ನ ದೈಹಿಕ ಕುಂಟುತನದಿಂದ ಅನುಭವಿಸುವ ನೋವು ಹಾಗೂ ಆ ನೋವನ್ನು ದಾಟಿ ಬರಲು ಪ್ರಯತ್ನಿಸುವಲ್ಲಿ ಅವಳ ಪರಿಪಾಟಲನ್ನು ಕತೆಯಾಗಿ ಹೆಣೆಯುವಲ್ಲಿ ಲೇಖಕಿಯ ಪಾತ್ರ ಮೆಚ್ಚುವಂಥದ್ದು ಎಂದು ದಿವ್ಯಾ ಶ್ರೀಧರ್ ರಾವ್ ಅವರು ಪುಸ್ತಕದ ಮುನ್ನುಡಿಯಲ್ಲಿ ಹೇಳಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕದವರಾದ ಸ್ವಾತಿ.ಕೆ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪತ್ರಿಕೋದ್ಯಮ ಪದವಿ ಪಡೆದು. ಪ್ರಸ್ತುತ ಇನ್ಶಾಟ್ಸ್ ನ್ಯೂಸ್ appನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದು ,ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ಅವರು ಬೇರೆ ಬೇರೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ. ಕೆಲಸದ ಮಧ್ಯೆ ಏನಾದರೂ ಹೊಸತನ್ನು ಸಾಧಿಸಬೇಕು ಹಾಗೂ ಬರವಣಿಗೆಯ ಮುಂದಿನ ರೂಪಗಳನ್ನು ಕಾಣುವ ಹಂಬಲದಲ್ಲಿ ಬರೆದ ಮೊದಲ ಪುಸ್ತಕ, ನನ್ನವರಾರಿಲ್ಲಿ ...
READ MORE