ಕವಿ ವೆಂಕಟೇಶ ಪಿ. ಗುಡೆಪ್ಪನವರ ಅವರು ಕವನ ಸಂಕಲನ-ನನ್ನ ನಾಕ.ಈ ಸಂಕಲನದಲ್ಲಿ 104 ಕವನಗಳಿವೆ. ಸಾಹಿತಿ ಡಾ.ಅಶೋಕ ನರೋಡೆ ಅವರು ಕೃತಿಗೆ ಮುನ್ನುಡಿ ಬರೆದು ‘ಸಹಜವಾಗಿ ತುಂಬ ಸರಳವಾಗಿ ಹಾಗೂ ಲೀಲಾಜಾಲವಾಗಿ ಬರವಣಿಗೆ ಮಾಡಿರುವುದು ಕಂಡುಬರುತ್ತದೆ. ಕವನಗಳು ಪ್ರಬುದ್ಧವಾಗಿವೆ. ಪರಿಸರ, ಜಾತಿಪ್ರೀತಿ , ಸಂಕ್ರಮಣ, ಸುಧಾರಕ , ವಿಷಭೂಮಿ , ಹಸುಕರು , ರೈತಹತ್ಯೆ , ಮೋಸದಾಟ, ಸ್ವಾಭಿಮಾನಿ , ನವಶಕ್ತಿ, ಹೊನ್ನಶೂಲ, ಕ್ರಾಂತಿಸಿರಿ, ಭೂಮಿತಾಯಿ , ಮನುಷ್ಯತ್ವ , ಬದಲಾಗು , ಕಾರ್ಮಿಕರು, ಸಂವಿಧಾನ , ಪ್ರಜಾತಂತ್ರ ಇವೆ ಮೊದಲಾದ ಕಾವ್ಯ ಶೀರ್ಷಿಕೆ ಅವಲೋಕಿಸಿದರೆ ಈ ಕಾವ್ಯಗಳ ವೈವಿಧ್ಯತೆ, ಸಾಮಾಜಿಕ ಕಾಳಜಿ, ಸಮಷ್ಠಿ ಪ್ರಜ್ಞೆ, ಸುಮಾಜ ಸುಧಾರಕನ ಕನವರಿಕೆ ಮನದಟ್ಟಾಗುತ್ತದೆ.ಕವಿತೆಗಳಲ್ಲಿ ವ್ಯಕ್ತಿ ಚಿತ್ರಗಳು ಅರ್ಥಪೂರ್ಣವಾಗಿ ಅರಳಿವೆ. ಕೆಲವು ರಚನೆಗಳಲ್ಲಿ ಪ್ರಗತಿಪರ ನಿಲುವಿದೆ, ವೈಚಾರಿಕತೆ ಇದೆ.. ಬಂಡಾಯ ಕಾವ್ಯದ ಲಕ್ಷಣಗಳು ಇವೆ. ಗ್ರಾಮೀಣ ಸೊಗಡಿದೆ. ದೇಶೀಯ ತಾಜಾತನ ಇದೆ ’ ಎಂದು ಪ್ರಶಂಸಿಸಿದ್ದಾರೆ.
ಲೇಖಕ ವೆಂಕಟೇಶ ಪಿ. ಗುಡೆಪ್ಪನವರ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಉತ್ತೂರು ಗ್ರಾಮದವರು. ಮುಧೋಳದ ಶ್ರೀ ಸಂಗಮನಾಥ ಪ್ರೌಢಶಾಲೆಯ ಮುಖ್ಯೋಪಾಧ್ಯಯರು. ‘ನನ್ನ ನಾಕ’ ಎಂಬುದು ಅವರ ಮೊದಲ ಕವನ ಸಂಕಲನ. ...
READ MORE