ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಮೈತ್ರೇಯಿ ದೇವಿ ಅವರ ಬಂಗಾಲಿ ಭಾಷೆಯ ಈ (ನ ಹನ್ಯತೆ) ಕಾದಂಬರಿಯನ್ನು ಲೇಖಕಿ ಗೀತಾ ವಿಜಯಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
‘ಶರೀರ ನಾಶವಾದರೂ ಆತ್ಮ ಎಂದಿಗೂ ನಾಶವಾಗದು. ಯಾವ ಘಟನೆಯೂ, ಯಾವ ಪ್ರೀತಿಯೂ ಅವಿನಾಶಿ. ಅದು ನೆನಪಿನಲ್ಲಿ ಮಾತ್ರ ಚಿರಸ್ಥಾಯಿ’ ಎಂಬುದು ಯಮಧರ್ಮನು ನಚಿಕೇತನಿಗೆ ಹೇಳುವ (ಕಠೋಪನಿಷತ್ತು) ಕಾದಂಬರಿಗೆ ಪ್ರಮುಖ ಶೀರ್ಷಿಕೆಯಾಗಿ ಮೂಲ ಲೇಖಕಿಯು ಬಳಸಿಕೊಂಡಿದ್ದಾರೆ.
ಯುರೋಪಿಯನ್ ನಿವಾಸಿ ಮಿರ್ಚಾ ಇಲಿಯಡ್ ಎಂಬಾತನೊಂದಿಗೆ ಇದ್ದ ತಮ್ಮ ಮಾನವೀಯ ಹಂತದ ಪ್ರೇಮವನ್ನು ಆತ ಹೇಗೆ ತಪ್ಪಾಗಿ ಗ್ರಹಿಸಿಕೊಂಡಿದ್ದ ಎಂಬುದರ ಕುರಿತು ಬರೆದ ಆತ್ಮಕಥೆ ಇದು. ಆ ಮಿರ್ಚಾ ಇಲಿಯಡ್ ‘ಮೈತ್ರೇಯಿದೇವಿ’ ಎಂದು ಆತ್ಮಕಥೆ ಬರೆಯುತ್ತಾನೆ. ಅಲ್ಲಿ ಮೈತ್ರೀಯಿ ದೇವಿಯ ವ್ಯಕ್ತಿತ್ವದ ಹರಣವಾಗಿರುತ್ತದೆ. ಆದರೆ, ಈ ಆತ್ಮಕಥೆ ಯುರೋಪನಲ್ಲಿ ಪ್ರಸಿದ್ಧಿ ಪಡೆದಿರುತ್ತದೆ. ಈ ಬಗ್ಗೆ ಮೈತ್ರೇಯಿದೇವಿಗೆ ತಿಳಿದಿದ್ದು, ಕೃತಿ ಪ್ರಕಟವಾಗಿ 40 ವರ್ಷಗಳ ನಂತರ. ಇದಕ್ಕೆ ಪ್ರತಿಯಾಗಿ ಮೈತ್ರೇಯಿದೇವಿ ಅವರು ಬರೆದ ಆತ್ಮಕಥೆ ರೂಪದ ಕಾದಂಬರಿಯೇ-ನ ಹನ್ಯತೆ.
ಲೇಖಕಿ ಗೀತಾ ವಿಜಯಕುಮಾರ ಅವರು ರವೀಂದ್ರನಾಥ ಠಾಕೂರು ಅವರ ಬಾಲ್ಯ ಬದುಕು ಸಾಧನೆ ಕುರಿತು ಬರೆದ ಕೃತಿ-ಬಾಲ್ಯ ಜೀವನ ಸ್ಮೃತಿ ಹಾಗೂ ಅಜ್ಞಾತ-ಅಪರಿಚಿತ ವಿವೇಕಾನಂದ ಎಂಬುದು ಮೂಲ ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ. ...
READ MORE