‘ಮೂಳೆಯ ಹಂದರ’ ಕೃತಿಯು ತಿಲಕ ಅವರ ಕಾದಂಬರಿಯಾಗಿದೆ. ಈ ಕಾದಂಬರಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವರ್ಷಾಕಾಲವು ಕಳೆದು ಆಗಲೇ ಒಂದೆರಡು ತಿಂಗಳು ಸಂದಿವೆ. ರೀತ ಕಾಲವೂ ತಳವೂರಿ ವೈಭವದಿಂದ ಮೆರೆಯುತ್ತಿದೆ. ಎಲ್ಲೆಲ್ಲಿಯ ಮೈಕೊರೆ ಯುವ ಚಳಿಯೂ ತಾನೇತಾನಾಗಿ ವಿಹರಿಸುತ್ತಿರುವಾಗ ಮಲೆನಾಡಿನಲ್ಲಿದರ ಸ್ಟೇಚ್ಛಾವೃತ್ತಿಯನ್ನು ಇನ್ನೊಮ್ಮೆ ಬಣ್ಣಿಸಬೇಕೆ ? ಅಂತಹ ಮಲೆನಾಡಿನಲ್ಲಿ ಚಳಿಗಾಲದ ಒಂದಾನೊಂದು ದಿನ ರಾತ್ರಿಯ ಮೂರನೆಯ ಪ್ರಹಾರವಾಗಲೇ ಸರಿದು ನಾಲ್ಕನೆಯ ಪ್ರಹರದ ಕೋಳಿಯಾಗಲೇ ಕೂಗಿದೆ. ನಿನಾದೇವಿಯ ತೋಳತೆಯಲ್ಲಿ ಗಾಢನಿದ್ರಾಪರವಶವಾದ ಜಗತ್ತು ಮತ್ತಷ್ಟು ಅವಳನ್ನು ಬಾಚಿ ತಬ್ಬಿ ಅವಳ ಸುಖಸ್ವಪ್ನದ ಆವರಣದ ಮರೆಯಲ್ಲಿ, ಇನಿಗೊರಳ ಜೋ ಗುಳದಲ್ಲಿ ತಲ್ಲೀನವಾಗಿ ಮೈಮರೆತು ನಿದ್ರಿಸುತ್ತಿದೆ. ಮಾರ್ಗದರ್ಶಿಯ ಪ್ರಯೋ ದಶಿಯ ಚಂದ್ರನು ರಾತ್ರಿಯೆಲ್ಲ ಪಯಣಮಾಡಿದ ದಣುವಿನಿಂದ ನಿಸ್ತೇಜಿತ ನಾಗಿ ದೂರದ ಗಿರಿಶ್ರೇಣಿಯ ಮರೆಯಲ್ಲಿ ವಿಶ್ರಾಂತಿಪಡೆಯಲು ಬಯಸಿ ಇಳಿ ಯುತ್ತಿದ್ದಾನೆ. ಅವನ ಕ್ಷೀಣ ಕಿರಣಮಾಲೆಯು ದಟ್ಟವಾಗಿ ಮುಂದೊತ್ತಿ ಬರುವ ಕಗ್ಗತ್ತಲೆಯ ರಾಶಿಗಂಜಿ ಹಿಂದೆ ಹಿಂದೆ ಸರಿಯುತ್ತಿದೆ. ಎಲ್ಲೆಡೆಯ ಗಂಭೀರ ಮೌನದ ಘೋರತಪಸ್ಸು ಕಳೆಯೇರಿ ಬೆಳೆಯುತ್ತಿದೆ. ಸಕಲ ಜಗತ್ತೂ ಅಂದ ಕಾರದ ಸಮಾಧಿಯಲ್ಲಿ ತಲ್ಲೀನವಾಗಿ ಇಳಿ ಇಳಿದು ಹೋಗುತ್ತಿದೆ. ವಿಶ್ವದ ತುಂ' ಬೆಲ್ಲ ಹರಡಿದ್ದ ತಿಂಗಳ ತಂಬೆಳಕನ್ನು ಬಡಿದೋಡಿಸಿ ಕಾರ್ಗತ್ತಲೆಯ ಹೊದಿಕೆ ಯಲ್ಲಿ ಮರೆಸುತ್ತಿದ್ದ ಅಂಧಕಾರದಲ್ಲಿ ಮನೆ-ಮಠಗಳನ್ನೂ, ಓಣಿ-ಕೇರಿಗಳನ್ನೂ ಅಲ್ಲೊಂದು ಇಲ್ಲೊಂದು ಉರಿಯುತ್ತಿರುವ ನಿಜವಾದ ಬೀದಿಯ ದೀಪಗಳು, ಅಜ್ಞಾನಾಂಧಕಾರದಿಂದ ಕೂಡಿದ ದೇಹಿಯ ಸೆರೆಯಲ್ಲಿ ಸಿಕ್ಕ ಆತ್ಮನಂತೆ ಸಾಕ್ಷೀ `ಭೂತವಾಗಿ ನಿಂತು ಶೂನ್ಯ ದೃಷ್ಟಿಯಿಂದ ನೋಡುತ್ತಿವೆ.
ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ. ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...
READ MORE