ಲೇಖಕ ಶ್ರೀನಿವಾಸರಾವ್ ಕೊರಟಿ ಅವರ ಕೃತಿ ‘ಮಿಸ್ ಲೀಲಾವತಿ’, ನಡೆದ ಕಥೆಯಂತೆ ಕಾಣುವ ಒಂದು ಕಾಲ್ಪನಿಕ ಕಾದಂಬರಿ. ಹೆಣ್ಣು ಇಂದು ಎಲ್ಲಾ ರಂಗಗಳಲ್ಲಿ ಗಂಡಿ ನೊಡನೆ ಸ್ಪರ್ಧೆಗೆ ನಿಂತಿದ್ದಾಳೆ.ಸುಭದ್ರವಾದ ಸಮಾಜ ಜೀವನದಲ್ಲಿ ತನ್ನ ಪಾತ್ರವೇನೆಂಬುದನ್ನು ಅರಿತಿದ್ದಾಳೆ .ಅವಳಿಂದು ಅಬಲೆಯಲ್ಲ.ಸಂಸಾರದ ನೊಗಕ್ಕೆ ಹೆಗಲು ಕೊಟ್ಟು ಅಲ್ಲೇ ತನ್ನ ಇಹಪರಗಳನ್ನು ಸಾಧಿಸಬಯಸುವ ಸತೀ ಮಣಿ ಯೂ ಅಲ್ಲ.ಅವಳೂ ಗಂಡಿನಂತೆಯೇ ಸುಖ-ದು:ಖಗಳಲ್ಲಿ ಹಿಗ್ಗಿ ಕುಗ್ಗುವ ವ್ಯಕ್ತಿ. ಅವಳಲ್ಲೂ ವಿಚಾರ ಕ್ರಾಂತಿ ನಡೆದಿದೆ.ಇಷ್ಟೆಲ್ಲಾ ಪ್ರಗತಿ ಅವಳಿಗೆ ಹೆಚ್ಬು ಕಾಲ ವಿದ್ಯಾರ್ಜನೆ ಮಾಡಲು ಅವಕಾಶ ದೊರೆತಿರುವುದರಿಂದ ಉಂಟಾಗಿದೆ. ಈ ಕಾದಂಬರಿಯಲ್ಲಿ ಬರುವ ಲೀಲಾವತಿ,ಸುಮಿತ್ರೆ ಯರು ಈ ಸಮಸ್ಯೆಯ ಪ್ರತೀಕ ವಾಗಿದ್ದಾರೆ.ವಿವಾಹ ಪದ್ದತಿಯ ಬಗ್ಗೆ ತಿರಸ್ಕಾರ ಹೊಂದಿದ್ದ ಲೀಲಾವತಿಯ ಒಂದು ಮುಖದ ಚಿತ್ರ ,ಆದರ್ಶ ಗೃಹಿಣಿಯಾಗಬೇಕೆನ್ನುವ ಸುಮಿತ್ರೆಯ ಇನ್ನೊಂದು ಮುಖದ ಚಿತ್ರ. ಮುಂದೇನಾಯ್ತು? ತಿಳಿಯಲು ಕಾದಂಬರಿ ಓದಬೇಕು.
ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...
READ MORE