ಮಂಜಿನ ಹಾದಿ ಮತ್ತು ನೆನೆದವರ ಮನದಲ್ಲಿ ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ.ಒಂದು ಆಕಸ್ಮಿಕ ಅಪಘಾತದಲ್ಲಿ ಮೂವರು ಗೆಳತಿಯರು ಏಕಾಏಕಿ ತಮ್ಮ ಗಂಡಂದಿರನ್ನು ಕಳೆದುಕೊಂಡಾಗ ಅವರು ಪ್ರತ್ಯೇಕವಾಗಿ ತಮ್ಮ ಜೀವನವನ್ನು ಹೇಗೆ ಎದುರಿಸುತ್ತಾರೆಂಬುದೇ ‘ಮಂಜಿನ ಹಾದಿ’ ಕಾದಂಬರಿಯ ಕಥಾವಸ್ತು. ಪರೋಪಕಾರಿ ಸ್ವಭಾವದ ವೃದ್ಧರೊಬ್ಬರು ಮಗ ಸೊಸೆಯನ್ನು ದೂರ ಮಾಡಿಕೊಂಡು ಯಾರೋ ಹೊರಗಿನವರಿಗೆ ಮನೆ ಬಾಡಿಗೆಗೆ ಕೊಟ್ಟು ಒಂದು ದೊಡ್ಡ ಗಂಡಾಂತರದಲ್ಲಿ ಸಿಲುಕಿಕೊಳ್ಳುವ ಕಾದಂಬರಿ ‘ನೆನದವರ ಮನದಲ್ಲಿ.’
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE