ಮಾಣಿಕ್ಯ ಬಂಧನ

Author : ಹೆಚ್.ಜಿ. ರಾಧಾದೇವಿ

Pages 120

₹ 70.00




Published by: ಶ್ರೀ ಲಕ್ಷ್ಮಿ ವೆಂಕಟೇಶ್ವರ ಪ್ರಕಾಶನ

Synopsys

ಕಾದಂಬರಿಗಾರ್ತಿ ಹೆಚ್.ಜಿ ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ‘ಮಾಣಿಕ್ಯದ ಬಂಧನ’. ಈ ಕಾದಂಬರಿಯಲ್ಲಿ ರಾಧಾದೇವಿಯವರು ಪರೋಪಕಾರಿಯಾದ ಸಂತೃಪ್ತ ಮನಸ್ಸಿನ ನಾಯಕಿಯೊಬ್ಬಳನ್ನು ಸೃಷ್ಟಿಸಿದ್ದಾರೆ . ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು ಎನ್ನುವ ಉಕ್ತಿಯಂತೆ ನಾಯಕಿ ವಿಶಾಲಾಕ್ಷಿ ತನಗೆ ಐಶ್ವರ್ಯ ಬಂದಾಗ ತನ್ನ ಹಿತೈಷಿಗಳಿಗೆಲ್ಲ ಒಳ್ಳೆಯದೇ ಮಾಡುತ್ತಾಳೆ .ವನಜಮ್ಮನ ಮೂರು ಹೆಣ್ಣು ಮಕ್ಕಳ ಮದುವೆಗಳಿಗೆ ಸಹಾಯ ಮಾಡುತ್ತಾಳೆ ಮಾತ್ರವಲ್ಲ , ಮುರಿದು ಹೋಗಲಿದ್ದ ಪಾರ್ವತಿಯ ಸಂಸಾರವನ್ನು ಒಂದು ಗೂಡಿಸುತ್ತಾಳೆ . ಭಾರತಿ ತನ್ನ ಮೂರ್ಖತನದಿಂದ ಮದುವೆ ಮುರಿದುಕೊಳ್ಳುವ ಹಂತ ತಲುಪಿದಾಗ ಅವಳಿಗೆ ಬುಧ್ಧಿ ಕಲಿಸಿ ಅವಳ ಸಂಸಾರ ಸ್ಥಿರ ಗೊಳಿಸುತ್ತಾಳೆ . ತನ್ನದಲ್ಲದ ಮಗುವನ್ನೂ ಪ್ರೀತಿಸಿ , ಅದರ ವಿದ್ಯಾಭ್ಯಾಸಕ್ಕೆ ಏರ್ಪಾಟು ಮಾಡುತ್ತಾಳೆ . ಹೀಗೆ ವಿಶಾಲಾಕ್ಷಿ ಒಬ್ಬ ಆದರ್ಶ ನಾಯಕಿ . ಆದರೆ ಕೊಂಚ ಬಾಲಿಶ ಮನೋಭಾವವೂ ಇದೆ . ಹಿಂದೊಮ್ಮೆ ತನ್ನನ್ನು ಕಾಡಿದವರ ಎದುರು ತನ್ನ ಶ್ರೀಮಂತಿಕೆ ವೈಭವ ಪ್ರದರ್ಶನದ ಚಪಲ..ಅವಳ ಜೀವನದಲ್ಲಿ ಬಂದ ತಿರುವುಗಳೇನು ಎಂಬ ಪ್ರಶ್ನೆಯ ಸುತ್ತ ಕಾದಂಬರಿಯನ್ನು ಹೆಣೆಯಲಾಗಿದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books