ಮಾನವ ಜಮೀನ್ ಶೀರ್ಷೇಂದು ಮುಖೋಪಾಧ್ಯಾಯ ಅವರ ಕಾದಂಬರಿಯ ಕನ್ನಡಾನುವಾದ. ಮಾನವ ಜಮೀನ್ ಕೇವಲ ಆಕಾರದಲ್ಲೊಂದೇ ಅಲ್ಲ ಗಾತ್ರದಲ್ಲೂ ವಿಶಾಲ, ವಿಸ್ತ್ರತ ಹಾಗೂ ವೈಚಿತ್ರಮಯವೆನಿಸಿದೆ. ಪ್ರಸ್ತುತ ಕಾಲದ ಶಕ್ತಿಶಾಲಿ ಕಥೆಗಾರ ಶೀರ್ಷೇಂದು ಮುಖೋಪಾಧ್ಯಾಯರಿಂದ ಈ ರಚನೆ ರಚಿತವಾದಂದಿನಿಂದಲೂ ಈ ಕೃತಿಗೆ ಪೈಪೋಟಿ ಯಾಗಿ ಆಕೃತಿಯೇ ಸಾಟಿಯಾಗಿದೆ ಆಧುನಿಕ ಬಂಗಾಲಿ ಸಾಹಿತ್ಯದ ಸ್ಮರಣೀಯ ಹಾಗು ಹೆಗ್ಗಳಿಕೆಗೆ ಪಾತ್ರವೆನಿಸಿದೆ. ಐತಿಹ್ಯದೊಡನೆ ಬೇರನ್ನು ಬೆಸೆದ ಈ ಅಪರೂಪದ ಸೃಷ್ಟಿಯಲ್ಲಿ ವರ್ತಮಾನದೊಂದಿಗೆ ಆತ್ಮದ ಭವಿಷ್ಯತ್ತಿನೆಡೆಗಿನ ನಡಿಗೆಯಲ್ಲಿ ಟಿಸಿಲೊಡೆದಿವೆ ರಂಬೆಕೊಂಬೆಗಳು ಅಸಂಖ್ಯ ಘಟನೆಗಳು, ಪಾತ್ರಗಳು ಹಾಗೂ ನಿರಂತರ ಸಮಸ್ಯೆಯೇ ಈ ಕಾದಂಬರಿ, ಇಷ್ಟಾದರೂ ಎಲ್ಲು ಸಿಕ್ಕುಗಳಿಲ್ಲ. ನಿಷ್ಣಾತ ಲೇಖಕರ ದಕ್ಷ ಹಸ್ತದಲ್ಲಿ ನಿಯಂತ್ರಿತ ಪ್ರತಿಯೊಂದು ಪಾತ್ರಗಳು ಹಾಗು ಕಥೆ ನಿಶ್ಚಿಂತವಾಗಿ ಸ್ವತಂತ್ರವಾಗಿ ಗುರಿಯತ್ತ ಸಾಗುತ್ತವೆ. ಲೋಭ, ಈರ್ಷೆ, ಪ್ರೀತಿ, ವೈರಿ ದಮನ ಬದುಕುವಾಸೆ, ಮಹತ್ವಾಕಾಂಕ್ಷೆ ಇತ್ಯಾದಿಗಳ ಮೂಲಕ ಕುಂಭಿಪಾಕದಲ್ಲಿ ನಿರಂತರವಾಗಿ ಬೆಂದಿದ್ದಾನೆ ಮಾನವ. ಇದನ್ನೇ ಮೂಲವಾಗಿಟ್ಟುಕೊಂಡು ರಚಿಸಲಾಗಿದೆ ಈ ಕಾದಂಬರಿ. ಈ ಕೃತಿಗೆ ಸರಿಸಮನಾಗಿ ನಿಲ್ಲಬಲ್ಲ ಕೃತಿ ಸ್ವತಃ ಈ ಕೃತಿಯಲ್ಲದೆ ಬೇರಿನ್ನಾವ ಕೃತಿಯಂತೂ ಸರಿಸಾಟಿಯಾಗಿಲ್ಲ. ಮನುಷ್ಯ ಮನುಷ್ಯರ ನಡುವಿನ ಬಿರುಕು ಹಾಗೂ ಬೆಸುಗೆಯ ಕುರಿತು ರಚಿಸಲ್ಪಟ್ಟಿದೆ ಈ ಕಾದಂಬರಿ.
ಲೇಖಕಿ ಗೀತಾ ವಿಜಯಕುಮಾರ ಅವರು ರವೀಂದ್ರನಾಥ ಠಾಕೂರು ಅವರ ಬಾಲ್ಯ ಬದುಕು ಸಾಧನೆ ಕುರಿತು ಬರೆದ ಕೃತಿ-ಬಾಲ್ಯ ಜೀವನ ಸ್ಮೃತಿ ಹಾಗೂ ಅಜ್ಞಾತ-ಅಪರಿಚಿತ ವಿವೇಕಾನಂದ ಎಂಬುದು ಮೂಲ ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿ. ...
READ MORE