‘ಮಚ್ಚೆ’ ಜಯಂತಿ ಚಂದ್ರಶೇಖರ್ ಅವರ ಕಾದಂಬರಿಯಾಗಿದೆ. “ಮಚ್ಚೆ” ಅರ್ಥಾತ್ ಗ್ರಾಮ್ಯ ಭಾಷೆಯಲ್ಲಿ “ಮತ್ತಿ” ಎಂಬುವುದು ಇಡೀ ಕಾದಂಬರಿಯಲ್ಲಿ ಅನ್ವರ್ಥಕವಾಗಿ ಧ್ವನಿಸುತ್ತದೆ. ಸಮಾಜದಲ್ಲಿ ಹಲವಾರು ಅಹಿತಕರ ಘಟನೆಗಳು ನಡೆಯುತ್ತವೆಯಾದರೂ ಸಮಾಜಕ್ಕೆ ಹೆದರಿದೆಯೋ, ನ್ಯಾಯ ನಿಷ್ಠೆಗೆ ತಲೆ ಬಾಗಿಯೋ ಇಂಥಹವು ದುರಂತದಲ್ಲಿ ಕೊನೆಗಾಣುವುದೇ ಹೆಚ್ಚು ಎಂಬುದನ್ನು ಇಲ್ಲಿ ಲೇಖಕಿ ವಿವರಿಸುತ್ತಾರೆ. ಇನ್ನು ಈ ಕೃತಿಯ ವೈಶಿಷ್ಟ್ಯವೆಂದರೆ ಗ್ರಾಮೀಣ ಭಾಷೆಯ ಸೊಗಡು. ಇದಕ್ಕೆ ಕಾದಂಬರಿಯಲ್ಲಿ ಬಂದಿರುವ ಸಂಭಾಷಣೆಗಳೇ ಸಾಕ್ಷಿ. ಇಲ್ಲಿನ ಸಂಭಾಷಣೆಗಳೆಲ್ಲವೂ ನೈಜವಾಗಿ ಮೂಡಿಬಂದಿದ್ದು, ಹಳ್ಳಿಯ ಬೀದಿ, ಮನೆಗಳಲ್ಲಿ ಹೀಗೇ ಮಾತಾಡುತ್ತಿರುವರೇನೋ ಅನ್ನುವಷ್ಟು ವಾಸ್ತವದಿಂದ ಕೂಡಿವೆ.
ಜಯಂತಿ ಚಂದ್ರಶೇಖರ್ ಅವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುಂಬಾರ ಕಾಲೋನಿಯ ಶ್ರವಣಬೆಳಗೊಳದವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಮಚ್ಚೆ(ಕಾದಂಬರಿ) ...
READ MORE