‘ಕುಸುಮಬಾಲೆ’ ದೇವನೂರು ಮಹಾದೇವ ಅವರ ಕಾದಂಬರಿ ಲಯಾಕಾರ ವಿನ್ಯಾಸಕರ ನುಡಿಯಿಂದ ಮಹಾದೇವ ಅನುಸರಿಸಿರುವ ಕಥನ ರೀತಿಯು ಜಾನಪದೀಯವಾಗಿ ಕಂಡರೂ ಅದು ಸಂಪೂರ್ಣ ಜಾನಪದೀಯವಲ್ಲ. ಪಂಪನು ದೇಸೀ-ಮಾರ್ಗಗಳನ್ನು ಮಿಶ್ರ ರೂಪ ಮಾಡಿ ಹೊಸ ತಿರುಳ್ಗನ್ನಡವನ್ನು ಕಂಡುಕೊಂಡಂತೆ ಮಹಾದೇವ ಕೂಡ ಜಾನಪದೀಯ ಮತ್ತು ಚಾಲ್ತಿಯ ರೀತಿಗಳನ್ನು ಮಿಶ್ರ ಮಾಡಿ ಭಾಷೆಯನ್ನು ಹೇಗೋ ಹಾಗೆ ಕಥನ ರೀತಿಯನ್ನೂ ಒಂದು ವಿಶಿಷ್ಟ ಮಿಶ್ರಣದಲ್ಲಿ ಪಂಚಲೋಹಪಾಕ ಮಾಡಿದ್ದಾರೆ.
ಸಾಮಾನ್ಯ ಅರ್ಥದಲ್ಲಿ ಕುಸುಮಬಾಲೆಯು ಒಂದು ಕತೆಯೋ, ನೀಳ್ಗತೆಯೋ ಕಡೆಗೆ ಕಾದಂಬರಿಯೋ ಆಗದೆ ಮತ್ತು ಪಾತ್ರಗಳು ವಾಚಾಳಿಯಾಗಿರದೆ ಸ್ವಗತ ಲಹರಿಯಲ್ಲಿ ವಿರಮಿಸಿ, ಅಂತರಂಗಿಕ ಐಕ್ಯಸ್ಥಿತಿಯನ್ನೇ ಬಿಂಬಿಸುವುದರಿಂದ ಅದು ಒಂದು ನಾಟಕವೂ ಆಗದೆ,
ಉಸಿರಿನಂತೆ ಸಹಜ, ಸರಾಗ ಸುಲಭವೇ ಆದ ಆಡುಭಾಷೆಯ ಉತ್ತಮ ಕವಿತೆಗಳು ಮೆರವಣಿಗೆ ಹೊರಟ ಒಂದು ಕಾವ್ಯವೋ ಮಹಾಕಾವ್ಯವೋ ಆಗುತ್ತದೆ
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮ. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ 1973-74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ’ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ಕೃತಿಗಳನ್ನು ...
READ MORE1991ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ